News Karnataka Kannada
Thursday, May 02 2024
ದೇಶ

ಆಗಸ್ಟ್‌ 5ರಂದು ಸ್ಮರಣೀಯ ದಿನ– ಹಾಕಿ ತಂಡದ ಸಾಧನೆ ಕೊಂಡಾಡಿದ ಪ್ರಧಾನಿ

Primeminister Modi 29072021
Photo Credit :

ನವದೆಹಲಿ: ಒಲಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವು 41 ವರ್ಷಗಳಿಂದ ಅನುಭವಿಸುತ್ತಿದ್ದ ಪದಕದ ಬರ ಆಗಸ್ಟ್‌ 5ರಂದು ಕೊನೆಗೊಂಡಿದೆ. ಹೀಗಾಗಿ, ಈ ದಿನ ಪ್ರತಿಯೊಬ್ಬ ಹಾಕಿ ಪ್ರೇಮಿ, ಕ್ರೀಡಾಭಿಮಾನಿಯ ಪಾಲಿಗೆ ಅತ್ಯಂತ ಸ್ಮರಣಿಯವಾದುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಸಾಧನೆ ಮಾಡಿರುವ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ತಂಡದ ಎಲ್ಲ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಖುದ್ದಾಗಿ ಕರೆಮಾಡಿ ಅಭಿನಂದಿಸಿದ್ದಾರೆ.

ಭಾರತೀಯನ ಮನಸ್ಸು ಮತ್ತು ಹೃದಯದಲ್ಲಿ ಹಾಕಿ ವಿಶೇಷ ಸ್ಥಾನವನ್ನು ಗಳಿಸಿಕೊಂಡಿದೆ. ಪ್ರತಿಯೊಬ್ಬ ಹಾಕಿ ಪ್ರೇಮಿ ಮತ್ತು ಕ್ರೀಡಾಭಿಮಾನಿ ಪಾಲಿಗೆ ಆಗಸ್ಟ್‌ 5, 2021 ಅತ್ಯಂತ ಸ್ಮರಣೀಯ ದಿನವಾಗಿ ಉಳಿಯಲಿದೆ ಎಂದು ಟ್ವೀಟ್‌ ಮೂಲಕ ಕೊಂಡಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು