ಜರುಸಲೇಂ: ಹಮಾಸ್ ದಾಳಿ ಬಳಿಕ ಇಸ್ರೇಲ್ ಬೆನ್ನಿಗೆ ನಿಂತಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ಗೆ ಬುಧವಾರ ಪ್ರಯಾಣಿಸಲಿದ್ದಾರೆ ಎಂದು ತಿಳಿಸಲಾಗಿತ್ತು . ಆದರೆ ಇದೀಗ ಜೋ ಬ್ರೆಡನ್ ಇಂದೇ ಭೇಟಿ ಕೊಟ್ಟಿದ್ದು , ಇಸ್ರೇಲ್ಗೆ ಭೀಮಬಲ ಬಂದಂತಾಗಿದೆ. ಇನ್ನು ಗಾಜಾ ಪಟ್ಟಿಗೆ ವಿದೇಶಿ ನೆರವು ತರಲು ಸಹಕಾರ ನೀಡುವುದಾಗಿ ಇಸ್ರೇಲ್ನಿಂದ ಅಮೆರಿಕಕ್ಕೆ ಭರವಸೆ ಸಿಕ್ಕಿದೆ ಎಂದಿದ್ದಾರೆ . ಇನ್ನು ಯುದ್ಧ ಭೂಮಿಯಲ್ಲಿನ ಪರಿಸ್ಥಿತಿಯನ್ನು ಜೋ ಬೈಡನ್ ಪರಿಶೀಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೋ ಬೈಡನ್ ಅವರು ಜೋರ್ಡಾನ್ ಮತ್ತು ಈಜಿಪ್ಟ್ ನಾಯಕರು ಹಾಗೂ ಪ್ಯಾಲೆಸ್ಟೀನ್ ಅಥಾರಿಟಿ ಅಧ್ಯಕ್ಷರ ಜತೆ ಮಾತುಕತೆ ನಡೆಸಲಿದ್ದಾರೆ.
ಜೋರ್ಡಾನ್, ಈಜಿಪ್ಟ್ ನಾಯಕರೊಂದಿಗೆ ಚರ್ಚೆ ನಡೆಸುವ ಬೈಡನ್
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.