News Karnataka Kannada
Monday, April 29 2024
ವಿದೇಶ

ಬಾಂಬ್‌ ದಾಳಿ ವಿರೋಧಿಸಿ ಎಂಟು ರಾಷ್ಟ್ರಗಳಲ್ಲಿ ಪ್ರತಿಭಟನೆ: ಇಂಗ್ಲೆಂಡ್‌, ಫ್ರಾನ್ಸ್‌ ಗೆ ಎಚ್ಚರಿಕೆ

Pratibatane
Photo Credit : IANS

ದೋಹಾ : ಗಾಜಾ ಪಟ್ಟಿಯ ಅಲ್-ಅಹ್ಲಿ ಅರಬ್ ಆಸ್ಪತ್ರೆಯ ಮೇಲಿನ ಮಾರಣಾಂತಿಕ ಬಾಂಬ್ ದಾಳಿ ಪ್ರಪಂಚ ಹಲವು ಪ್ರದೇಶಗಳಲ್ಲಿ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ಕನಿಷ್ಠ ಎಂಟು ದೇಶಗಳಲ್ಲಿ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಟೆಹ್ರಾನ್‌ನಲ್ಲಿರುವ ಬ್ರಿಟಿಷ್ ಮತ್ತು ಫ್ರೆಂಚ್ ರಾಯಭಾರ ಕಚೇರಿಗಳ ಹೊರಗೆ ನೂರಾರು ಜನರು ಪ್ರತಿಭಟನೆ ನಡೆಸಿದರು. ಈ ಬಾಂಬ್‌ ದಾಳಿ “ಫ್ರಾನ್ಸ್ ಮತ್ತು ಇಂಗ್ಲೆಂಡ್‌ಗೆ ಸಾವಿನ ಎಚ್ಚರಿಕೆ ಎಂದು ಪ್ರತಿಭಟನಾಕಾರರು ಕೂಗಿದರು.

ಇರಾನ್ ರಾಜಧಾನಿಯಲ್ಲಿರುವ ಫ್ರೆಂಚ್ ರಾಯಭಾರ ಕಚೇರಿಯ ಆವರಣದ ಗೋಡೆಗಳ ಮೇಲೆ ಮೊಟ್ಟೆಗಳನ್ನು ಎಸೆದರು ಎಂದು ಅಲ್ ಜಜೀರಾ ವರದಿ ಮಾಡಿದೆ. ಅಮ್ಮಾನ್‌ನಲ್ಲಿರುವ ಯುಎಸ್ ಮತ್ತು ಇಸ್ರೇಲಿ ರಾಯಭಾರ ಕಚೇರಿಗಳಲ್ಲಿ ಸಾವಿರಾರು ಜನರು ಜಮಾಯಿಸಿ ಪ್ರತಿಭಟಿಸಿದರು. ಲೆಬನಾನ್‌ನಲ್ಲಿಯೂ ಪ್ರತಿಭಟನೆಗಳು ನಡೆದಿದ್ದು, ಅಲ್ಲಿ ಹಿಜ್ಬುಲ್ಲಾ ಗಡಿಯಲ್ಲಿ ಇಸ್ರೇಲಿ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆದಿದೆ.
ಅದೇ ರೀತಿ ಟ್ಯುನೇಷಿಯಾದ ಫ್ರೆಂಚ್ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆದಿದೆ. ಅಲ್ಲದೆ ಲಿಬಿಯಾ, ಯೆಮೆನ್ ಮತ್ತು ಮೊರಾಕೊದಲ್ಲಿ ಪ್ರತಿಭಟನೆಗಳು ನಡೆದವು ಎಂದು ಅಲ್ ಜಜೀರಾ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು