ವಾಷಿಂಗ್ಟನ್: ಯುವತಿಯೊಬ್ಬಳು ಸಲೂನ್ ನಲ್ಲಿ ಹೇರ್ ಸ್ಟ್ರೈಟ್ನಿಂಗ್ ಮಾಡಿಸಿದ್ದರಿಂದ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿರುವುದು ಬೆಳಕಿಗೆ ಬಂದಿದೆ.
ದಿ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ ವರದಿಯಲ್ಲಿ ವೈದ್ಯರೊಬ್ಬರು ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡಿದ್ದಕ್ಕೆ ಯುವತಿಯ ಆರೋಗ್ಯದಲ್ಲಿ ಆದ ಏರುಪೇರಿನ ಬಗ್ಗೆ ವಿವರಿಸಿದ್ದಾರೆ.
ವರದಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ಯುವತಿ ಹೆಸರನ್ನು ಗೌಪ್ಯವಾಗಿಡಲಾಗಿದೆ. ಯವತಿಗೆ ಚಿಕಿತ್ಸೆ ನೀಡಿದ ವೈದ್ಯರೊಬ್ಬರು ಆಕೆ ಕೂದಲು ನೇರ (ಹೇರ್ ಸ್ಟ್ರೈಟ್ನಿಂಗ್) ಮಾಡಿಸಿಕೊಳ್ಳುವಾಗ ಬಳಸಿರುವ ಉತ್ಪನ್ನಗಳಿಂದ ಅಂಗಾಂಗಕ್ಕೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ಬಹಿರಂಗ ಪಡಿಸಿದ್ದಾರೆ.
26 ವರ್ಷದ ಯುವತಿಯು ಹೇರ್ ಟ್ರೀಟ್ ಮೆಂಟ್ ಪಡೆಯಲು ಜೂನ್ 2020, ಏಪ್ರಿಲ್ 2021 ಹಾಗೂ ಜುಲೈ 2022ರಲ್ಲಿ ಸಲೂನ್ ಗೆ ಭೇಟಿ ನೀಡಿದ್ದಾರೆ. ಈ ಹೇರ್ ಟ್ರೀಟ್ ಮೆಂಟ್ ಗೂ ಮುಂಚೆ ಮಹಿಳೆಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಆದರೆ ಸಲೂನ್ ಗೆ ಭೇಟಿ ನೀಡಿದ ನಂತರ ಆಕೆಗೆ ವಾಂತಿ, ನಿಶಕ್ತಿ, ಜ್ವರ ಮತ್ತು ಬೆನ್ನುನೋವಿನಂತ ತೊಂದರೆಗಳು ಕಾಣಿಸಿಕೊಂಡಿದೆ. ಸಲೂನ್ ನಲ್ಲಿ ಕೇಶ ಚಿಕಿತ್ಸೆ ಪಡೆಯುವಾಗಲೂ ಆಕೆಗೆ ನೆತ್ತಿಯಲ್ಲಿ ಉರಿಯಂತಹ ಸಮಸ್ಯೆ ಕಾಣಿಸಿಕೊಂಡಿದೆ. ಅಲ್ಲಿನ ಹೇರ್ ಟ್ರೀಟ್ ಮೆಂಟ್ ನಿಂದ ತಲೆಯಲ್ಲಿ ಅಲ್ಸರ್ ರೀತಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಲೂನ್ ನಲ್ಲಿ ಹೇರ್ ಟ್ರೀಟ್ ಮೆಂಟ್ ತೆಗೆದುಕೊಂಡ ಸಮಯದಲ್ಲಿ ಕೆಮಿಕಲ್ ಗ್ಲೈಯೋಸಿಲಿಕ್ ಆಸಿಡ್ ಕ್ರೀಮ್ ಬಳಕೆ ಮಾಡಲಾಗಿದೆ. ಅದರ ಬಳಕೆಯಿಂದಲೇ ಮಹಿಳೆಯ ನೆತ್ತಿಯಲ್ಲಿ ಉರಿ, ಅಲ್ಸರ್ ರೀತಿ ಪರಿಣಮಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಕೆಮಿಕಲ್ ಬಳಕೆಯು ಆಕೆಯ ನೆತ್ತಿಯಿಂದ ಕಿಡ್ನಿವರೆಗೂ ಹಾನಿಗೊಳಗಾಗುವಂತಾಗಿದೆ. ಇದರಿಂದ ಮೂತ್ರಪಿಂಡ ಕಾರ್ಯಗಳು ಸರಾಗವಾಗಿ ನಡೆಯದಂತೆ ಮೂತ್ರದಲ್ಲಿ ರಕ್ತ, ಮೂತ್ರವಿಸರ್ಜನೆ ಜಾಗದಲ್ಲಿ ಉರಿಯಂತ ಸಮಸ್ಯೆಗೆ ಕಾರಣವಾಗಿದೆ.
ಕೂದಲನ್ನು ನೇರವಾಗಿಸಲು ಕೆಮಿಕಲ್ ಗ್ಲೈಯೋಸಿಲಿಕ್ ಆಸಿಡ್ ಬಳಕೆ ಮಾಡಲಾಗುತ್ತದೆ. ಇದು ಕೂದಲನ್ನು ನೇರ ಮಾಡುವಲ್ಲಿ ಸಹಾಯಕಾರಿಯಾಗಿದೆ. ಆದರೆ ಇದರ ಕೆಮಿಕಲ್ ಅಂಗಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ಲೈಯೋಸಿಲಿಕ್ ಆಸಿಡ್ ಅನ್ನು ನಿಷೇಧಿಸಬೇಕು, ಅದರ ಬದಲಿಗೆ ಬೇರೆ ಸುರಕ್ಷಿತ ಕೆಮಿಕಲ್ ಬಳಸಬೇಕು ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಹಾಗೂ ಔಷಧಾಲಯದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಜೋಶುವಾ ಡೇವಿಡ್ ಕಿಂಗ್ ಅವರು ಲೈವ್ ಸೈನ್ಸ್ ಗೆ ತಿಳಿಸಿದ್ದಾರೆ.