News Karnataka Kannada
Wednesday, May 01 2024
ಬೆಂಗಳೂರು

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ರಿವಿವ್ಯೂ

ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ವೇಳೆ ಒಂದು ತಮಾಷೆಯ ಘಟನೆ ನಡೆಯಿತು. ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೇನ್ ಶಾಂಟೊ ಅವರ ವಿಚಿತ್ರ ನಿರ್ಧಾರ ಪರಿಶೀಲನಾ ವ್ಯವಸ್ಥೆ (ಡಿಆರ್​​ಎಸ್) ಕರೆ ವೀಕ್ಷಕವಿವರಣೆಗಾರರು ಮತ್ತು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು.
Photo Credit : NewsKarnataka

ಬೆಂಗಳೂರು: ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ವೇಳೆ ಒಂದು ತಮಾಷೆಯ ಘಟನೆ ನಡೆಯಿತು. ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೇನ್ ಶಾಂಟೊ ಅವರ ವಿಚಿತ್ರ ನಿರ್ಧಾರ ಪರಿಶೀಲನಾ ವ್ಯವಸ್ಥೆ (ಡಿಆರ್​​ಎಸ್) ಕರೆ ವೀಕ್ಷಕವಿವರಣೆಗಾರರು ಮತ್ತು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು.

ಇದು 44ನೇ ಓವರ್‌ನಲ್ಲಿ ನಡೆದಿದೆ. ಕುಸಾಲ್ ಮೆಂಡಿಸ್ ಬ್ಯಾಟಿಂಗ್ ಮಾಡುತ್ತಿದ್ದರು. ತೈಜುಲ್ ಇಸ್ಲಾಂ ಬೌಲಿಂಗ್ ಮಾಡಿದರು.

ಇಸ್ಲಾಂ ಹಾಕಿದ ಚೆಂಡನ್ನು ಮೆಂಡಿಸ್ ಜಸ್ಟ್ ಟಚ್ ಮಾಡಿಬಿಟ್ಟರು. ಬ್ಯಾಟ್‌ನ ಮಧ್ಯಭಾಗಕ್ಕೆ ಬಾಲ್ ಬಡಿದಿರುವುದು ಸ್ಪಷ್ಟವಾಗಿ ಕಾಣಿಸಿತು. ಆದರೆ, ಶಾಂಟೊ ತಡಮಾಡದೆ ವಿಮರ್ಶೆ ತೆಗೆದುಕೊಂಡರು. ಅಂಪೈರ್​ಗೆ ಇದು ಸ್ಪಷ್ಟವಾಗಿ ನಾಟೌಟ್ ಎಂದು ತಿಳಿದಿತ್ತು. ಆದರೆ ಈ ವಿಮರ್ಶೆಗೆ ಎಲ್ಲರೂ ನಕ್ಕರು. ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾ ಪ್ರೇಮಿಗಳು ಬಾಂಗ್ಲಾದೇಶದ ನಿರ್ಧಾರವನ್ನು ಟ್ರೋಲ್ ಮಾಡಿದ್ದಾರೆ.

ರಿಪ್ಲೆನಲ್ಲಿ ಚೆಂಡು ಬ್ಯಾಟ್​ಗೆ ತಾಗಿರುವುದು ನೋಡಿ ನಾಯಕ ಮುಖಭಂಗಕ್ಕೆ ಒಳಗಾದರು. ಇದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಡಿಆರ್​ಎಸ್​​ಗಳಲ್ಲಿ ಒಂದಾಗಿದೆ. ಈ ಪ್ರಮಾದವು ಆಶ್ಚರ್ಯವನ್ನು ಉಂಟು ಮಾಡಿದೆ.

ಇದು ಈ ದಶಕದ ಕೆಟ್ಟ ರಿವಿವ್ಯೂ ಎಂದು ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ. ಡಿಆರ್‌ಎಸ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ನಾನು ಮನೆಯಿಂದಲೇ ಹೇಳುತ್ತಿದ್ದೆ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು