Bengaluru 27°C
Ad

8,300 ಕೋಟಿ ರೂ. ವಂಚನೆ : ಭಾರತೀಯ ಮೂಲದ ಉದ್ಯಮಿಗೆ ಕಠಿಣ ಶಿಕ್ಷೆ

ಭಾರತೀಯ ಮೂಲದ ಅಮೆರಿಕದ ಉದ್ಯಮಿ, ಔಟ್‌ಕಮ್‌ ಹೆಲ್ತ್‌ ಸಂಸ್ಥೆಯ ಸಹ ಸಂಸ್ಥಾಪಕ ರಿಶಿ ಶಾ ಅವರಿಗೆ 8,300 ಕೋಟಿ ರೂ ವಂಚಿಸಿರುವ ಉದ್ಯಮಿಗೆ 7 ವರ್ಷ ಜೈಲು ವಿಧಿಸಲಾಗಿದೆ.

ಅಮೇರಿಕಾ : ಭಾರತೀಯ ಮೂಲದ ಅಮೆರಿಕದ ಉದ್ಯಮಿ, ಔಟ್‌ಕಮ್‌ ಹೆಲ್ತ್‌ ಸಂಸ್ಥೆಯ ಸಹ ಸಂಸ್ಥಾಪಕ ರಿಶಿ ಶಾ ಅವರಿಗೆ 8,300 ಕೋಟಿ ರೂ ವಂಚಿಸಿರುವ ಉದ್ಯಮಿಗೆ 7 ವರ್ಷ ಜೈಲು ವಿಧಿಸಲಾಗಿದೆ.

Ad
300x250 2

ಗೋಲ್ಡ್‌ ಸಚ್ಸ್‌ ಗ್ರೂಪ್‌, ಗೂಗಲ್‌ ಪೇರೆಂಟ್‌ ಆಲ್ಫಬೆಟ್‌ ಮತ್ತು ಇಲಿನಾಯ್ಸ್ ಗವರ್ನರ್ ಜೆಬಿ ಪ್ರಿಟ್ಜ್ಕರ್ ಅವರ ಸಾಹಸೋದ್ಯಮ ಬಂಡವಾಳ ಸಂಸ್ಥೆಗೆ ತಮ್ಮ ಸ್ಕೀಂ ಮೂಲಕ ಶಾ ಕೋಟ್ಯಂತರ ರೂ.ವಂಚನೆ ಮಾಡಿರುವುದು ಸಾಬೀತಾಗಿದ್ದು, ಅಮೆರಿಕ ಜಿಲ್ಲಾ ನ್ಯಾಯಾಧೀಶ ಥಾಮನ್‌ ಡರ್ಕಿನ್‌ ಏಳೂವರೆ ವರ್ಷ ಕಠಿನ ಸಜೆ ವಿಧಿಸಿದೆ.

ಆದರೆ ಹೂಡಿಕೆದಾರರಿಗೆ ಸುಳ್ಳು ಹೇಳಿ ವಂಚನೆ, ಸುಳ್ಳು ಜಾಹೀರಾತು ಪ್ರಕಟಿಸಿ ವಂಚನೆ ಹೀಗೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಶಾಗೆ 15ವರ್ಷಗಳ ಶಿಕ್ಷೆ ವಿಧಿಸಬೇಕೆಂದು ಕೋರ್ಟ್‌ಗೆ ಸಂತ್ರಸ್ತರು ಮನವಿ ಮಾಡಿದ್ದರು. ಈ ಹಿನ್ನಲೆ ಫೆಡರಲ್ ಕೋರ್ಟ್‌ ಅನೇಕ ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿತ್ತು.

ಇದೀಗ ಶಾ ಮತ್ತು ಮತ್ತು ಇತರ ಇಬ್ಬರು ಸಹೋದ್ಯೋಗಿಗಳಿಗೆ ಕಳೆದ ವಾರ ಚಿಕಾಗೋದಲ್ಲಿ US ಜಿಲ್ಲಾ ನ್ಯಾಯಾಧೀಶ ಥಾಮಸ್ ಡರ್ಕಿನ್ ಅವರು ಶಿಕ್ಷೆ ವಿಧಿಸಿದ್ದಾರೆ ಎಂದು US ಅಟಾರ್ನಿ ಕಚೇರಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

Ad
Ad
Nk Channel Final 21 09 2023
Ad