Ad

ಡಾ.ಪುನೀತ್ ರಾಜ್ ಕುಮಾರ್ ರ ಹೆಸರಿನಲ್ಲಿ ಆರೋಗ್ಯ ಇಲಾಖೆಯ ಮಹತ್ವದ ಯೋಜನೆ

ಸಮಾಜಸೇವೆ ಮೂಲಕ ಸದ್ದಿಲ್ಲದೇ ಸುದ್ದಿ ಮಾಡಿದ, ಯುವಕರ ಕಣ್ಮಣಿ ಸ್ಯಾಂಡಲ್ ವುಡ್ ನ ಖ್ಯಾತ ನಟ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ರ ಹೆಸರಿನಲ್ಲಿ ಸರ್ಕಾರ ಆರೋಗ್ಯ ಇಲಾಖೆಯಲ್ಲಿ ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ.

ಮೈಸೂರು:   ಸಮಾಜಸೇವೆ ಮೂಲಕ ಸದ್ದಿಲ್ಲದೇ ಸುದ್ದಿ ಮಾಡಿದ, ಯುವಕರ ಕಣ್ಮಣಿ ಸ್ಯಾಂಡಲ್ ವುಡ್ ನ ಖ್ಯಾತ ನಟ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ರ ಹೆಸರಿನಲ್ಲಿ ಸರ್ಕಾರ ಆರೋಗ್ಯ ಇಲಾಖೆಯಲ್ಲಿ ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ.

Ad
300x250 2

ನಟ ದಿ.ಡಾ.ಪುನೀತ್ ರಾಜಕುಮಾರ್ ಹೃದಯ ಸ್ಥಂಬನದಿಂದ ನಿಧನ ಹೊಂದಿದ್ದರು. ಇದರಿಂದ ಇಡೀ ರಾಜ್ಯ ಸೇರಿದಂತೆ ದೇಶದಾದ್ಯಂತ ಸಾವಿನ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು.

ಕರ್ನಾಟಕ‌ ಸರ್ಕಾರದ ಡಾ.ಪುನೀತ್ ರಾಜಕುಮಾರ್‌ ಹೃದಯ ಜ್ಯೋತಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಹೃದಯಘಾತ ದಿಂದಾಗುವ ಸಾವು ನೋವಿನ ಪ್ರಮಾಣವನ್ನು ತೆಲಡೆಗಟ್ಟಲು ಮುಂದಾಗಿದೆ.

ವ್ಯಕ್ತಿಗೆ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿ ನಂತರ ಇಸಿಜಿ ಪರೀಕ್ಷೆಯಲ್ಲಿ ವ್ಯತ್ಯಾಸ ಕಂಡು ಬಂದರೆ ವೈದ್ಯರು ಸುಮಾರು 36 ಸಾವಿರದಿಂದ 40 ಸಾವಿರ ವೆಚ್ಚದ ಒಂದು‌ ಚುಚ್ಚುಮದ್ದನು ನೀಡಲಿದ್ದಾರೆ.

ಈ ಚುಚ್ಚುಮದ್ದು ಪಡೆದ 120 ನಿಮಿಷ (2 ಗಂಟೆ) ಗಳವರೆಗೆ ಹೃದಯಾಘಾತವಾಗುವುದನ್ನು ತಡೆಗಟ್ಟುತ್ತದೆ. ನಂತರದಲ್ಲಿ‌ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಹೃದಯ ಆಸ್ಪತ್ರೆಗೆ ರೋಗಿಯು ದಾಖಲಾಗಿ ಹೆಚ್ಚಿನ ಪರೀಕ್ಷೆ ಪಡೆಯುವ ಮೂಲಕ ಇನ್ನಷ್ಟು ಹೆಚ್ಚಿನ‌ ಚಿಕಿತ್ಸೆ ಪಡೆಯಬಹುದು ಎಂದು ಹೆಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯ ಡಾ.ಪ್ರಜ್ವಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಉಚಿತ ಚುಚ್ಚುಮದ್ದು : ಈ ಯೋಜನೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಗೊಳಿಸ ಲಾಗಿದ್ದು, ಖಾಸಗೀ ಆಸ್ಪತ್ರೆ ಸೇರಿದಂತೆ ಬೇರೆ ಎಲ್ಲಿಯೂ ಉಚಿತವಾಗಿ ಲಭ್ಯವಿರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು, ಅದರಂತೆ ಹೆಚ್.ಡಿ.ಕೋಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಯೋಜನೆಯಲ್ಲಿ ಕಳೆದ ಒಂದು ತಿಂಗಳಿನಿಂದ 3 ಚುಚ್ಚು ಮದ್ದುಗಳನ್ನು ನೀಡಲಾಗಿದೆ. ಹೃದಯಾಘಾತಕ್ಕೊಳಗಾದ ವ್ಯಕ್ತಿಗಳು ಪ್ರಾಥಮಿಕವಾಗಿ ಈ ಚುಚ್ಚುಮದ್ದು ಪಡೆದು ಹಾಗೂ ಹೆಚ್ಚಿನ ಚಿಕಿತ್ಸೆಯ ನಂತರ ಯಾವುದೇ ತೊಂದರೆಯಿಲ್ಲದೆ ನಿಶ್ಚಿಂತೆಯಿಂದಿದ್ದಾರೆ ಎಂದು ಡಾ. ಪ್ರಜ್ವಲ್ ಕುಮಾರ್ ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad