News Karnataka Kannada
Friday, May 10 2024
ವಿದೇಶ

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 15ರ ಬಾಲಕ

Photo Credit :

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 15ರ ಬಾಲಕ

ಹೈದರಾಬಾದ್: 15ವರ್ಷದ ಬಾಲಕನೊಬ್ಬ 5 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿದ ಘಟನೆ ಗೋದಾವರಿ ಜಿಲ್ಲೆಯ ಟೆಟ್ಲಿ ಗ್ರಾಮದ ತಾನುಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೊರಗಡೆ ಬಾಲಕಿ ಆಟವಾಡುತ್ತಿದ್ದನ್ನು ನೋಡಿದ ಯುವಕ ಆಕೆಗೆ ಬಿಸ್ಕೆಟ್ ನೀಡಿ ಶಾಲಾ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಶಾಲಾ ಶೌಚಾಲಾಯದ ಹೊರಗಡೆ ಅತ್ಯಾಚಾರ ಮಾಡಲು ಸಹಾಯ ಮಾಡಿದ್ದ ಆತನ ಮೂವರು ಗೆಳೆಯರಿಂದ ಈ ವಿಚಾರ ತಿಳಿದು ಬಂದಿದೆ.

ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ‘ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಬಿಸ್ಕೆಟ್ ನೀಡಿ ಶಾಲಾ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದೇವೆಂದು’ ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಬಳಿಕ ಆಕೆಯನ್ನು ಮನೆ ಹತ್ತಿರ ಬಿಟ್ಟು ಬಂದಿದ್ದಾರೆ. ರಕ್ತಸ್ರಾವದಿಂದ ಬಳಲುತ್ತಿದ್ದ ಮಗುವನ್ನು ಕಂಡು ಆಕೆಯ ಅಜ್ಜಿ ವಿಚಾರಿಣೆಗೆ ಒಳಪಡಿಸಿದಾಗ ಮಗು ಆದ ಘಟನೆಯಬನ್ನು ವಿವರಿಸಿದ್ದಾಳೆ. ಅತ್ಯಾಚಾರವಾಗಿರುವ ಬಗ್ಗೆ ಅನುಮಾನಗೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಂತರ ಆ ನಾಲ್ವರು ಹುಡುಗರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ವಿಷಯ ಬಹಿರಂಗಗೊಂಡಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು