ಅಫ್ಘಾನಿಸ್ತಾನ : ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಆರಂಭವಾದಾಗಿನಿಂದ ಅಫ್ಘಾನಿಗಳಿಗೆ ಸಂಕಷ್ಟ ಶುರುವಾಗಿದೆ.
ತಾಲಿಬಾನ್ ಸರ್ಕಾರ ರಚನೆ ಪ್ರಕ್ರಿಯೆಗೆ ಪಾಕಿಸ್ತಾನ ಸಹಾಯ ಮಾಡುತ್ತಿದ್ದು, ಪಾಕಿಸ್ತಾನಿಗಳ ವಿರುದ್ಧ ಅಫ್ಘಾನಿಗಳು ತಿರುಗಿಬಿದ್ದಿದ್ದಾರೆ. ರಸ್ತೆಯಲ್ಲೇ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದೀಗ ಪ್ರತಿಭಟನೆಗಳ ವಿರುದ್ಧ ತಾಲಿಬಾನ್ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಇನ್ನು ಮುಂದೆ ಯಾವುದೇ ರೀತಿಯ ಪ್ರತಿಭಟನೆ ಮಾಡಬೇಕೆಂದರೂ ಮೊದಲು ಆಂತರಿಕ ಸಚಿವಾಲಯದ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿ ಪಡೆಯದೆ ಪ್ರತಿಭಟಿಸಿದರೆ ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.