ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಅಫ್ಘಾನಿಗಳು ದೇಶ ತೊರೆಯಲು ಮುಂದಾಗಿದ್ದಾರೆ.
ಬೇರೆ ದೇಶಗಳ ರಕ್ಷಣಾ ಕಾರ್ಯ ಮುಗಿದಿರುವುದರಿಂದ ನಮ್ಮನ್ನು ಯಾರೂ ಕರೆದೊಯ್ಯುವುದಿಲ್ಲ ಎಂದು ಅಫ್ಘನ್ನರು ಮನಗಂಡಿದ್ದಾರೆ.
ಇದೀಗ ಪಾಕಿಸ್ತಾನದ ಗಡಿಗಳತ್ತ ನಡೆದುಕೊಂಡೇ ಅಫ್ಘನ್ನರು ಹೋಗುತ್ತಿದ್ದು, ಪಾಕಿಸ್ತಾನಕ್ಕೆ ತೆರಳುವ ಗಡಿ ಮುಚ್ಚಲಾಗಿದೆ.
ಗಡಿಯ ಪ್ರಮುಖ ರಸ್ತೆ ಚಮನ್ನನ್ನು ಪಾಕ್ ಮುಚ್ಚಲಾಗಿದ್ದು, ಆಫ್ಘನ್ನರಿಗೆ ಮುಂದೇನು ಗತಿ ಎನ್ನುವಂತಾಗಿದೆ. ಭದ್ರತೆ ದೃಷ್ಟಿಯಿಂದ ಚಮನ್ ಗಡಿ ರಸ್ತೆಯನ್ನು ಸ್ವಲ್ಪ ದಿನ ಮುಚ್ಚಲಾಗುತ್ತದೆ ಎಂದು ಪಾಕಿಸ್ತಾನ ಆಂತರಿಕ ಸಚಿವ ಶೇಖ್ ರಶೀದ್ ಅಹಮದ್ ಹೇಳಿದ ಬೆನ್ನಲ್ಲೇ ಈ ವರದಿ ಬಂದಿದೆ.
1979ರ ರಷ್ಯಾ ದಾಳಿಯಿಂದ ಈಗಿನವರೆಗೂ ಪಾಕ್ನಲ್ಲಿ ಸುಮಾರು 30 ಲಕ್ಷ ಅಫ್ಘನ್ನರು ಇದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯ ನಿರಾಶ್ರಿತರನ್ನು ದೇಶದೊಳಗೆ ಬಿಟ್ಟುಕೊಳ್ಳಲು ಆಗುವುದಿಲ್ಲ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.