ಶಿಮ್ಲಾ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದಾರೆಯೇ . ಅದು ಕೂಡ ಕೊರೋನಾ ಎರಡನೇ ಅಲೆಯ ಈ ಅಬ್ಬರದ ಸಂದರ್ಭದಲ್ಲಿ ಎಂಬ ಒಂದು ಪ್ರಶ್ನೆ ಇದೀಗ ಮೂಡಿದೆ.
ಹೌದು, ಹಿಮಾಚಲಪ್ರದೇಶದಲ್ಲಿ ಡೊನಾಲ್ಡ್ ಟ್ರಂಪ್ ಹೆಸರಿನಲ್ಲಿ ಇ ಪಾಸ್ ಮಾಡಿಸಲಾಗಿದೆ . ಕೊರೋನಾ ಕಾರಣದಿಂದಾಗಿ ಹಿಮಾಚಲಪ್ರದೇಶಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಇ ಪಾಸ್ ಹೊಂದಿರಬೇಕಾದುದು ಕಡ್ಡಾಯವಾಗಿದ್ದು, ಡೊನಾಲ್ಡ್ ಟ್ರಂಪ್ ಹೆಸರಿನ ಪಾಸ್ ಇರುವುದೂ ಕಂಡುಬಂದಿದೆ.
ಆದರೆ ಅವರು ಬೇಟಿನೀಡಿಲ್ಲ. ಬದಲಾಗಿ ಅವರ ಹೆಸರನ್ನು ಬಂಡವಾಳವಾಗಿರಿಸಿಕೊಂಡು ವ್ಯಕ್ತಿಯೊಬ್ಬ ಫೇಕ್ ಪಾಸ್ ಮಾಡಿರುವುದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ, ಹಿರಿಯ ನಟ ಅಮಿತಾಭ್ ಬಚ್ಚನ್ ಹೆಸರಿನಲ್ಲಿ ಪಾಸ್ ಮಾಡಿಸಿದ್ದಾನೆ, ಎರಡು ಪಾಸ್ ಗಳಿಗೂ ಒಂದೇ ಆಧಾರ್ ಕಾರ್ಡ್ ನಂಬರ್ ನೀಡಿದ್ದಾನೆ . ಮೊಬೈಲ್ ಸಂಖ್ಯೆ ಕೂಡ ಒಂದೇ ಆಗಿದೆ . ಇದೀಗ ಪ್ರಕರಣ ಸಂಬಂಧ ಶಿಮ್ಲಾ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.