ಸ್ಯಾಂಟೊ ಡೊಮಿಂಗೊ : ಡೊಮಿನಿಕನ್ ರಿಪಬ್ಲಿಕ್ ಸ್ಯಾಂಟೋ ಡೆಮಿಂಗೊದಲ್ಲಿ ಖಾಸಗಿ ವಿಮಾನವೊಂದು ಪತನವಾಗಿ 9 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಘಟನೆಯಲ್ಲಿ ಏಳು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಆರು ಮಂದಿ ವಿದೇಶಿ ಪ್ರಜೆಗಳು ಮತ್ತು ಒಬ್ಬರು ಡೊಮಿನಿಕನ್ ಎಂದು ತಿಳಿದುಬಂದಿದೆ.
ಡೊಮಿನಿಕನ್ ರಿಪಬ್ಲಿಕ್ ನ ರಾಜಧಾನಿ ಸ್ಯಾಂಟೊ ಡೊಮಿಂಗೊದ ಲಾಸ್ ಅಮೇರಿಕಾಸ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡುವಾಗ ಖಾಸಗಿ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಒಂಬತ್ತು ಜನರು ಮೃತಪಟ್ಟರು ಎಂದು ವಿಮಾನದ ಆಪರೇಟರ್ ಹೆಲಿಡೋಸಾ ಏವಿಯೇಷನ್ ಗ್ರೂಪ್ ತಿಳಿಸಿದೆ.