ಪಶ್ವಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ಒಮಿಕ್ರಾನ್ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ದೇಶದಲ್ಲಿ ಒಟ್ಟಾರೆ ಒಮಿಕ್ರಾನ್ ಸೋಂಕಿತರ ಸಂಖ್ಯೆ 68ಕ್ಕೇರಿದೆ.
ಮಹಾರಾಷ್ಟ್ರದಲ್ಲಿ ಬುಧವಾರ ಒಂದು ದಿನದಲ್ಲಿ ಹೊಸದಾಗಿ 4 ಸೋಂಕು ಪ್ರಕರಣಗಳು ದೃಢಪಟ್ಟಿದ್ದು. ಅತೀ ಹೆಚ್ಚು 32 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ರಾಜಸ್ಥಾನ್ (17), ಕರ್ನಾಟಕ (3), ಗುಜರಾತ್ (4), ಕೇರಳ (1), ಆಂಧ್ರಪ್ರದೇಶ (1) ಮತ್ತು ದೆಹಲಿ (6) ಚಂಡೀಗಢ (1) ಮತ್ತು ತೆಲಂಗಾಣದಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ.
ಕರ್ನಾಟಕದಲ್ಲಿ ಪತ್ತೆಯಾದ ಮೂರು ಪ್ರಕರಣಗಳ ಪೈಕಿ ಒಬ್ಬರು ಒಮಿಕ್ರಾನ್ ಸೋಂಕಿನಿಂದ ಗುಣಮುಖಿತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.