ಸಣ್ಣ ಖಾಸಗಿ ವಿಮಾನವೊಂದು ಇಟಲಿಯ ಉತ್ತರದಲ್ಲಿರುವ ಮಿಲನ್ ನಗರದ ಹೊರವಲಯದಲ್ಲಿರುವ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಎಂಟು ಮಂದಿ ಅಸುನೀಗಿದ್ದಾರೆ
ಈ ಅಪಘಾತವು ಉಪನಗರ ಮೆಟ್ರೋ ನಿಲ್ದಾಣದ ಹೊರಗೆ ಸಂಭವಿಸಿದೆ. ಮಿಲನ್ನ ಲಿನಾಟಾ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗಿ ಈ ವಿಮಾನವು ಸಾರ್ಡಿನಾದತ್ತ ಸಾಗುತ್ತಿತ್ತು.
ಡಿಕ್ಕಿಯಾದ ಎರಡು ಅಂತಸ್ತಿನ ಕಟ್ಟಡದಲ್ಲಿ ರಿಪೇರಿ ಕಾಮಗಾರಿ ನಡೆಯುತ್ತಿದ್ದಿದ್ದರಿಂದ ಆ ಕಟ್ಟಡದಲ್ಲಿ ಯಾರು ಇರಲಿಲ್ಲ. ಹಾಗಾಗಿ ಇನ್ನಷ್ಟು ಅನಾಹುತ ತಪ್ಪಿದೆ. ಅಪಘಾತದ ತೀವ್ರತೆಯ ಪರಿಣಾಮ ವಿಮಾನದ ಡಿಕ್ಕಿಯ ಸದ್ದು ಅಕ್ಕಪಕ್ಕದ ಪ್ರದೇಶಗಳಿಗೂ ಕೇಳಿಸಿದೆ.
ಡಿಕ್ಕಿ ತೀವ್ರತೆ ವಿಮಾನಕ್ಕೆ ಬೆಂಕಿ ಹತ್ತಿಕೊಂಡು ಅಲ್ಲೆ ರಸ್ತೆಗಳಲ್ಲಿ ನಿಲ್ಲಿಸಿದ ವಾಹನಗಳಿಗೂ ತಗುಲಿದೆ. ಆದರೆ ಇದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.