News Karnataka Kannada
Saturday, May 04 2024
ವಿದೇಶ

ಮೆಟಾವರ್ಸ್ ಎಂದು ರೀಬ್ರಾಂಡ್ ಆಗುವತ್ತ ಫೇಸ್‌ಬುಕ್

Facebook
Photo Credit :

ಫೇಸ್‌ಬುಕ್ ಈಗಾಗಲೇ ತನ್ನ ಹೆಸರನ್ನು ಮೆಟಾವರ‍್ಸ್‌ಗೆ ಬದಲಾಯಿಸುವ ಮೂಲಕ ಹಕ್ಕು ಸಾಧಿಸುತ್ತಿದೆ. ಜನಪ್ರಿಯ ಜಾಲತಾಣ ಫೇಸ್‌ಬುಕ್ ಕಂಪನಿಗೆ ಮೆಟಾವರ್ಸ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

ಮೆಟಾವರ್ಸ್ ಮುಂದಿನ ದಶಕದಲ್ಲಿ 100 ಕೋಟಿ ಜನರನ್ನು ತಲುಪಲಿದೆ ಹಾಗೂ ಹೆಚ್ಚಿನ ಪಕ್ಷ ವರ್ಚುಯಲ್ ರಿಯಾಲಿಟಿ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ. ಡಿ. 1 ರಿಂದ ಫೇಸ್‌ಬುಕ್ NASDQ ಸ್ಟಾಕ್ ಸ್ಟಿಕ್ಕರ್ ಚಿಹ್ನೆ MVRS ಹೆಸರಿನಲ್ಲಿ ಟ್ರೇಡ್ ನಡೆಸಲಿದೆ.

ಮೆಟಾಮರ‍್ಸ್‌ನ್ನು ಸಾಮೂಹಿಕ ಸ್ಥಳವಾಗಿ ನಿರ್ಮಿಸಲು ಬಯಸುತ್ತೇನೆ. ಅಂತರ್ಜಾಲ ಒಂದು ಕಂಪನಿಯಿಂದ ಮಾತ್ರ ಪ್ರಾಬಲ್ಯ ಹೊಂದಿರಬಾರದು ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಫೇಸ್‌ಬುಕ್ ಬ್ರಾಂಡಿಂಗ್‌ನ್ನು ಮೆಟಾವರ‍್ಸ್‌ಗೆ ಸಮಾನಾರ್ಥಕವಾಗಿ ಮಾಡುವ ಮೂಲಕ ಫೇಸ್‌ಬುಕ್ ಈಗಾಗಲೇ ಸ್ಪರ್ಧೆಯಲ್ಲಿ ಒಂದು ಹೆಜ್ಜೆ ಮುಂದೆನಡೆದಿದೆ.

ಫೇಸ್‌ಬುಕ್ ಮೆಟಾ ಆಗಿದೆ. ಕೆಲವು ದಿನಗಳಿಂದ ಮೆಟಾ ಆಗಲು ಫೇಸ್‌ಬುಕ್ ತಯಾರಿ ನಡೆಸುತ್ತಿತ್ತು, ಕಂಪನಿಯು ಮೆಟಾ.ಕಾಂ ನ್ನು ಖರೀದಿಸಿತ್ತು. ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ @meta ಹ್ಯಾಂಡಲ್‌ನ್ನು ಹಿಡಿದಿದೆ. ಆದರೆ ಇನ್ಸ್‌ಟಾಗ್ರಾಂನಲ್ಲಿ ಬದಲಾವಣೆ ಆಗಿಲ್ಲ. ಕಂಪನಿಯು ಮೆನ್ಲೋ ಪಾರ್ಕ್‌ನಲ್ಲಿ ತನ್ನ ಫೇಮಸ್ ಸಿಂಬಲ್ ಥಂಬ್ಸ್‌ಅಪ್‌ನ್ನು ಹೊಸ ಮೆಟಾ ಲೋಗೋವಾಗಿ ಬದಲಾಯಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು