ಮುಂಬಯಿ: ಹಲ್ದಿಯಾದಿಂದ 60 ನಾಟಿಕಲ್ ದೂರದಲ್ಲಿ ಎಂವಿಎಸ್ ಎಸ್ ಎಲ್ ಹಡಗಿನಲ್ಲಿದ್ದ ಕಂಟೇನರ್ ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಬೆಂಕಿ ಹತ್ತಿಕೊಂಡಿದೆ.
ಈ ಹಡಗು ಕೃಷ್ಣಪಟ್ಟಣಂನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹಡಗಿನಲ್ಲಿ ಸುಮಾರು 464 ಕಂಟೇನರ್ ಗಳಲ್ಲಿ 60ಕ್ಕೂ ಹೆಚ್ಚು ಬೆಂಕಿಗೀಡಾಗಿದೆ ಎಂದು ವರದಿಗಳು ಹೇಳಿವೆ.
ಹಡಗಿನಲ್ಲಿ ಸುಮಾರು 22 ಮಂದಿ ಕ್ರೂ ಮೆಂಬರ್ ಗಳಲ್ಲಿ ಹನ್ನೊಂದು ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದ ಭಾರತೀಯ ನೌಕಾ ಪಡೆಯು ರಕ್ಷಣಾ ಕಾರ್ಯದಲ್ಲಿ ತೊಡಗಿದೆ.