News Karnataka Kannada
Monday, May 06 2024
ವಿದೇಶ

ಮತ್ತೊಂದು ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾದ ಇಸ್ರೋ

Photo Credit :

ಮತ್ತೊಂದು ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾದ ಇಸ್ರೋ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತೊಮ್ಮೆ ಉಪಗ್ರಹ ಉಡಾವಣೆ ಮಾಡಿ ಬಾಹ್ಯಾಕಾಶ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.

‘ನಾವಿಕ್’ ಎಂಬ ಪಥದರ್ಶಕ ಉಪಗ್ರಹ ಸಮೂಹದ ಭಾಗವಾಗಿ ಉಡಾವಣೆ ಮಾಡಿದ ಎಂಟನೇ ಉಪಗ್ರಹ ‘ಐಆರ್ಎನ್ಎಸ್ಎಸ್-1ಐ’ ಉಪಗ್ರಹವನ್ನು ಬಾಹ್ಯಾಕಾಶ ಕಕ್ಷೆಗೆ ಸೇರಿಸಿ ಇಸ್ರೋ ಯಶಸ್ಸು ಕಂಡಿದೆ.

ಆಂಧ್ರಪ್ರದೇಶ ಶ್ರೀಹರಿಕೋಟದ ಸತೀಶ್ ಧವನ್ ಎಂಬ ಬಾಹ್ಯಾಕಾಶ ಕೇಂದ್ರದಿಂದ ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ಪಿ.ಎಸ್.ಎಲ್.ವಿ-ಸಿ14 ಮೂಲಕ ‘ಐಆರ್ಎನ್ಎಸ್ಎಸ್-1ಐ’ ಉಪಗ್ರಹವನ್ನು ಉಡಾವಣೆ ಮಾಡಲಾಯಿತು.

ಐ.ಆರ್‌.ಎನ್‌.ಎಸ್.ಎಸ್–1ಎ ಉಪಗ್ರಹವು ಈವರೆಗೆ ಉಡಾವಣೆ ಮಾಡಲಾದ 7 ಉಪಗ್ರಹಗಳ ಪೈಕಿ ಮೊದಲನೆಯದ್ದು. ರೂಬಿಡಿಯಂ ಪರಮಾಣು ಗಡಿಯಾರ ನಿಷ್ಕ್ರಿಯಗೊಂಡ ಕಾರಣ ಆ ಉಪಗ್ರಹ ಕಾರ್ಯನಿರ್ವಹಿಸಲು ವಿಫಲವಾಗಿದೆ. ಈಗ ಪರ್ಯಾಯ ಉಪಗ್ರಹ ಉಡಾವಣೆಯ ಎರಡನೇ ಪ್ರಯತ್ನ ಸಂಪೂರ್ಣ ಯಶಸ್ವಿಯಾಗಿದೆ ಎಂದು ಖುದ್ದಾಗಿ ಇಸ್ರೋ ವಿಜ್ಞಾನಿಗಳೇ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
189

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು