News Karnataka Kannada
Monday, April 29 2024
ವಿದೇಶ

ಭಾರತೀಯ ಪ್ರಯಾಣಿಕರಿಗೆ ವಿಧಿಸಿದ್ದ ಕ್ವಾರಂಟೈನ್ ನಿಯಮ ಹಿಂಪಡೆದ ಇಂಗ್ಲೆಂಡ್ ಸರ್ಕಾರ

Dubai-Mangaluru flight passengers shocked to hear ticket prices
Photo Credit :

ಕೋವಿಶೀಲ್ಡ್ ಹಾಗೂ ಯಾವುದೇ ಯುಕೆ ಅನುಮೋದಿಸಿದ ಲಸಿಕೆ ಪಡೆದ ಭಾರತೀಯರಿಗೆ ವಿಧಿಸಿದ್ದ 10 ದಿನಗಳ ಕ್ವಾರಂಟೈನ್ ಅನ್ನು ಇಂಗ್ಲೆಂಡ್ ಸರ್ಕಾರ ಹಿಂಪಡೆದಿದೆ. ಈ ಹಿಂದೆ ಭಾರತೀಯ ಪ್ರಯಾಣಿಕರಿಗೆ ಕ್ವಾರಂಟೈನ್ ವಿಧಿಸಿದ್ದ ಇಂಗ್ಲೆಂಡ್ ಗೆ ಭಾರತ ತಿರುಗೇಟು ನೀಡಿದ್ದು, ಇಂಗ್ಲೆಂಡ್ ನಿಂದ ಭಾರತಕ್ಕೆ ಬರುವವರಿಗೆ ಕೂಡ 10 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

ಈ ಹೊಸ ನಿಯಮದ ಬಳಿಕ ಎಚ್ಚೆತ್ತುಕೊಂಡ ಇಂಗ್ಲೆಂಡ್ ಸರ್ಕಾರ ಭಾರತದಲ್ಲಿ ಸಂಪೂರ್ಣ ಲಸಿಕೆ ಪಡೆದ ಭಾರತೀಯ ಪ್ರಯಾಣಿಕರಿಗೆ ಇನ್ಮುಂದೆ ಇಂಗ್ಲೆಂಡ್ ನಲ್ಲಿ ಕ್ವಾರಂಟೈನ್ ನಲ್ಲಿರುವ ಅಗತ್ಯವಿಲ್ಲ ಹಾಗೂ ಈ ನಿಯಮ ಅ.11ರಿಂದ ಜಾರಿಗೆ ಬರಲಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್, ಅ. 11ರಿಂದ ಪೂರ್ಣ ಕೋವಿಶೀಲ್ಡ್ ಅಥವಾ ಯಾವುದೇ ಯುಕೆ ಅನುಮೋದಿಸಿದ ಲಸಿಕೆ ಪಡೆದ ಭಾರತೀಯರಿಗೆ ಇಂಗ್ಲೆಂಡ್ ನಲ್ಲಿ ಯಾವುದೇ ಕ್ವಾರಂಟೈನ್ ಇಲ್ಲ. ಈ ಬಗ್ಗೆ ನಿಕಟ ಸಂಪರ್ಕದಲ್ಲಿದ್ದ ಭಾರತ ಸರ್ಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು