ನವದೆಹಲಿ : ಭಾರತೀಯರು 2 ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರೂ 10 ದಿನಗಳ ಕ್ವಾರಂಟೈನ್ ಆಗಬೇಕು ಎಂಬ ನಿಯಮ ಜಾರಿಗೊಳಿಸಿದ್ದ ಬ್ರಿಟನ್, ಭಾರತ ಸರ್ಕಾರದ ಆಕ್ಷೇಪದ ಬೆನ್ನಲ್ಲೇ ಪ್ರಯಾಣಿಕರ ನಿಯಮವನ್ನು ಸಡಿಲಗೊಳಿಸಿದೆ. ಬುಧವಾರ ಇದು ಕೋವಿಶಿಲ್ಡ್ ಲಸಿಕೆಗೆ ಮಾನ್ಯತೆ ನೀಡಿದೆ. ಈ ಮೂಲಕ ಇನ್ಮುಂದೆ ಕಕೊರೋನಾ ಎರಡೂ ಡೋಸ್ ಲಡಿಕೆ ಪಡೆದವರು ಕ್ವಾರಂಟೈನ್ ಆಗಬೇಕಿಲ್ಲ.
ಯುಕೆ ಸರ್ಕಾರವು ಸೆಪ್ಟೆಂಬರ್ 18 ರಂದು ಈ ನೂತನ ನಿಯಮವನ್ನು ಹೊರಡಿಸಿತು. ಇದರ ಪ್ರಕಾರ, ಭಾರತವನ್ನು ಹೊರತುಪಡಿಸಿ, ಆಫ್ರಿಕಾ, ದಕ್ಷಿಣ ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್, ಟರ್ಕಿ, ಜೋರ್ಡಾನ್, ಥೈಲ್ಯಾಂಡ್ ಮತ್ತು ರಷ್ಯಾದಲ್ಲಿ ಲಸಿಕೆ ಹಾಕಿದ ಜನರು ಕೂಡ ಯುಕೆಯಲ್ಲಿ ಲಸಿಕೆ ಹಾಕಿಲ್ಲ ಎಂದು ಪರಿಗಣಿಸಲಾಗುತ್ತದೆ ಎಂದಿತ್ತು. ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಈ ನಿಯಮವನ್ನು ಅಸಂಬದ್ಧವೆಂದು ಟ್ವೀಟ್ ಮಾಡಿದ್ದರು. ಶಶಿ ತರೂರ್ ಅವರನ್ನು ಬ್ರಿಟನ್ನಲ್ಲಿ ತಡೆಯಲಾಗಿತ್ತು. ಇದರಿಂದಾಗಿ ಅವರು ತಮ್ಮ ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಅವನು ಅದನ್ನು ಅವಮಾನಕರ ಎಂದು ಉಲ್ಲೇಖಿಸಿದ್ದರು. ಈ ನಿಯಮಗಳು ಜನಾಂಗೀಯ ನಿಂದನೆ ಎಂದೂ ಕರೆದಿದ್ದರು.