ಇಂಗ್ಲೆಂಡ್ ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಇಂದಿನಿಂದ ಹೊಸ ಕೋವಿಡ್ ನಿಮಯ ಜಾರಿಯಾಗಲಿದೆ. ಭಾರತದಿಂದ ಲಸಿಕೆ ಪಡೆದು ಇಂಗ್ಲೆಂಡ್ ತೆರಳಿದ ಭಾರತೀಯರಿಗೆ 10 ದಿನಗಳ ಕಾಲ ಕ್ವಾರಂಟೈನ್ ವಿಧಿಸಿತ್ತು. ಈ ಹಿನ್ನೆಲೆ ಭಾರತ ಕೂಡ ಇಂಗ್ಲೆಂಡ್ ಪ್ರಯಾಣಿಕರಿಗೆ 10 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.
ಇಂದಿನಿಂದ ಜಾರಿಯಾಗಲಿರುವ ರೂಲ್ಸ್ ಏನು? ಭಾರತಕ್ಕೆ ಬರುವ ಇಂಗ್ಲೆಂಡ್ ಪ್ರಯಾಣಿಕರಿಗೆ ಕಡ್ಡಾಯ ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯ. ಭಾರತಕ್ಕೆ ಬಂದ ತಕ್ಷಣವೇ ಏರ್ ಪೋರ್ಟ್ ನಲ್ಲಿ RT-PCR ಪರೀಕ್ಷೆಗೆ ಒಳಗಾಗಬೇಕು. ಲಸಿಕೆ ಪಡೆದರೂ ಆರ್ಟಿಪಿಸಿಆರ್ ಪರೀಕ್ಷೆ, ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.