ಪಟ್ನಾ: ಎನ್ ಡಿಎ ಮೈತ್ರಿಪಕ್ಷಗಳಾಗಿರುವಂತಹ ಬಿಜೆಪಿ, ಜೆಡಿಯು ಮುಂದಿನ ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ಸೀಟು ಹಂಚಿಕೆ ಮಾಡಿಕೊಂಡಿದೆ.
ಬಿಜೆಪಿ ಮತ್ತು ಜೆಡಿಯು ತಲಾ 17 ಕ್ಷೇತ್ರಗಳು ಮತ್ತು ಲೋಕಜನಶಕ್ತಿ ಪಕ್ಷ ಆರು ಸೀಟುಗಳನ್ನು ಹಂಚಿಕೊಂಡಿದೆ.
ಇಂದು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಎಲ್ ಜೆಪಿಯ ಮುಖ್ಯಸ್ಥ ರಾಮವಿಲಾಸ್ ಪಾಸ್ವಾನ್ ಅವರು ಸೀಟು ಹಂಚಿಕೆ ಮಾಹಿತಿ ನೀಡಿದರು.
ಬಿಹಾರದಲ್ಲಿರುವ 40 ಲೋಕಸಭಾ ಕ್ಷೇತ್ರಗಳಲ್ಲಿ ಎನ್ ಡಿಎ ನೇತೃತ್ವದಲ್ಲಿ ಬಿಜೆಪಿ 2014ರಲ್ಲಿ 31 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು. 2014ರ ಚುನಾವಣೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ನಾಯಕತ್ವದ ಎಲ್ ಜೆಪಿಯು ಎನ್ ಡಿಎ ಮೈತ್ರಿಕೂಟದೊಂದಿಗೆ ಸ್ಪರ್ಧಿಸಿ ಏಳು ಸ್ಥಾನ ಗೆದ್ದಿತ್ತು.