ಜಕಾರ್ತ: ಪ್ರಬಲ ಭೂಕಂಪದ ಬಳಿಕ ಸುನಾಮಿ ಅಪ್ಪಳಿಸಿದ ಪರಿಣಾಮ ಸುಮಾರು 168 ಮಂದಿ ಮೃತಪಟ್ಟಿರುವ ಘಟನೆಯು ಇಂಡೋನೇಷ್ಯಾದ ಪ್ರವಾಸಿ ಸ್ಥಳವಾಗಿರುವ ತಾಂಜುಂಗ್ ಲೆಸುಂಗ್ ಬೀಚ್ ಬಳಿ ಶನಿವಾರ ರಾತ್ರಿ ನಡೆದಿದೆ.
ಭೂಕಂಪ ಹಾಗೂ ಸುನಾಮಿಯಿಂದಾಗಿ ಸುಮಾರು 62 ಮಂದಿ ಮೃತಪಟ್ಟು, 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಇಲ್ಲಿನ ಅನಾಕ್ ಕ್ರಕಾಟೋವಾ ಎಂಬ ದ್ವೀಪದಲ್ಲಿ ಜ್ವಾಲಾಮುಖಿಯು ಕಾಣಿಸಿಕೊಂಡಿರುವುದಾಗಿ ವರದಿಗಳು ಹೇಳಿವೆ. ಜ್ವಾಲಾಮುಖಿಯಿಂದಾಗಿ ಸಾವಿನ ಸಂಖ್ಯೆಯು ಮತ್ತಷ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.
2004ರ ಡಿಸೆಂಬರ್ 26ರಂದು ಸುನಾಮಿಯಿಂದಾಗಿ ವಿವಿಧೆಡೆಗಳಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.