ನವದೆಹಲಿ: ದೆಹಲಿ ಹಾಗೂ ಸುತ್ತಮುತ್ತಲಿನ ಕೆಲವೊಂದು ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ ಲಘು ಭೂಕಂಪನ ಕಾಣಿಸಿಕೊಂಡಿದೆ.
ದೆಹಲಿಯ ಎನ್ ಸಿಆರ್ ಸೇರಿ ಉತ್ತರ ಭಾರತದ ಕೆಲವೊಂದು ಪ್ರದೇಶಗಳಲ್ಲಿ ಭೂಕಂಪನ ಕಾಣಿಸಿಕೊಂಡಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 4.6ರಷ್ಟು ಇತ್ತು ಎಂದು ವರದಿಗಳು ಹೇಳಿವೆ.
ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಭೂಕಂಪನ ಕಾಣಿಸಿಕೊಂಡಿದೆ. ಭಾಗಪತ್ ಭೂಕಂಪನದ ಕೇಂದ್ರ ಬಿಂದುವಾಗಿದೆ ಎಂದು ಹೇಳಲಾಗಿದೆ.