News Karnataka Kannada
Friday, May 03 2024
ವಿದೇಶ

ಬಿರುಗಾಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗಿದ ಹಡಗು!

Boat
Photo Credit :

ಸೌದಿ ಅರೇಬಿಯಾದ ಸರಕು ಹಡಗು ಪರ್ಷಿಯನ್ ಗಲ್ಫ್‌ ಸಮುದ್ರ ಪ್ರದೇಶದಲ್ಲಿರುವ ಇರಾನ್‌ನ ಅಸ್ಸಾಲೂಯೆ ಬಂದರಿನ ಸಮೀಪ ಮುಳುಗಿದೆ.

ಈ ಹಡಗಿನಲ್ಲಿ ಭಾರತ, ಪಾಕಿಸ್ತಾನ, ಸುಡಾನ್, ಉಗಾಂಡಾ, ತಾಂಜಾನಿಯಾ ಮತ್ತು ಇಥಿಯೋಪಿಯಾದ 30 ಮಂದಿ ಸಿಬ್ಬಂದಿ ಹಡಗಿನಲ್ಲಿದ್ದರು. ದಕ್ಷಿಣ ಕರಾವಳಿಯಲ್ಲಿ ಹವಾಮಾನ ವೈಫರಿತ್ಯದಿಂದ ಎದ್ದ ಬಿರುಗಾಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗಿದೆ ಎಂದು ತಿಳಿದುಬಂದಿದೆ. ಹಡಗಿನಲ್ಲಿದ್ದ 16 ಮಂದಿಯನ್ನು ರಕ್ಷಿಸಲಾಗಿದೆ.

11 ಜನರಿಗೆ ಲೈಫ್‌ ಜಾಕೇಟ್‌ ಗಳನ್ನು ಒದಗಿಸಲಾಗಿದೆ. ಉಳಿದ ಇಬ್ಬರಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಡಗು ಆರು ದಿನಗಳ ಹಿಂದೆ ಕಾರುಗಳು ಮತ್ತು ಇತರ ಸರಕುಗಳನ್ನುಹೊತ್ತು ದಕ್ಷಿಣ ಇರಾಕ್‌ನ ಉಮ್ ಕಸ್ರ್ ಬಂದರಿತ್ತ ಹೊರಟಿತ್ತು. ಸಮುದ್ರದಲ್ಲಿ ಭಾರೀ ಬಿರುಗಾಳಿ ಕಾಣಿಸಿಕೊಂಡಿದ್ದು ಮುಳುಗಲು ಕಾರಣವಾಗಿದೆ. ಅಸ್ಸಾಲೂಯೆ ಬಂದರಿಒನಿಂದ ಕೇವಲ 30 ಕಿಮೀ ದೂರದಲ್ಲಿ ಮುಳಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು