News Karnataka Kannada
Monday, May 06 2024
ಗೋವಾ

ಪಣಜಿ: ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು, ನಟಿ ಸೇರಿದಂತೆ ಮೂವರ ರಕ್ಷಣೆ

UP teacher sent to jail for sexually assaulting 15 schoolgirls, 2 others booked
Photo Credit : IANS

ಪಣಜಿ : ಗೋವಾದ ಪಣಜಿ ಸಮೀಪದ ಸಂಗೋಲ್ಡಾ ಗ್ರಾಮದಲ್ಲಿ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ ಕ್ರೈಂ ಬ್ರ್ಯಾಂಚ್ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಲ್ಲದೇ ನಟಿಯೊಬ್ಬರು ಸೇರಿದಂತೆ ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

ಕ್ರೈ ಬ್ರ್ಯಾಂಚ್ ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆಯಲ್ಲಿ, ಕಿರುತೆರೆ ನಟಿ ಸೇರಿದಂತೆ ಇಬ್ಬರು ಮುಂಬೈ ನಿವಾಸಿಗಳಾಗಿದ್ದು, ಮೂರನೇ ಮಹಿಳೆ ಹೈದರಾಬಾದ್ ನಿವಾಸಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದೆ.

ಹಫೀಜ್ ಸೈಯದ್ ಬಿಲಾಲ್ ಎಂಬ ವ್ಯಕ್ತಿ ವೇಶ್ಯಾವಾಟಿಕೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಾಗಿ ಕ್ರೈಂ ಬ್ರ್ಯಾಂಚ್ ಗೆ ಮಾಹಿತಿ ಬಂದಿತ್ತು. ಇದರ ಆಧಾರದ ಮೇಲೆ ಆರೋಪಿ ಸೆರೆಗೆ ಜಾಲ ಬೀಸಲಾಗಿತ್ತು.

ಮಾಹಿತಿಯನ್ನು ಪರಿಶೀಲಿಸಿದ ನಂತರ ಗೋವಾ ಕ್ರೈಂ ಬ್ರ್ಯಾಂಚ್ ಪೊಲೀಸರು ಆರೋಪಿ ಬಂಧನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಹೈದರಾಬಾದ್ ಮೂಲದ ಈ ವ್ಯಕ್ತಿ, ವೇಶ್ಯಾವಾಟಿಕೆಗಾಗಿ ಸಂಗೋಲ್ಡಾ ಗ್ರಾಮದಲ್ಲಿನ ಹೋಟೆಲ್ ವೊಂದನ್ನು ಬುಕ್ ಮಾಡಿದ್ದು, ಮೂವರು ಮಹಿಳೆಯರಿಗೆ 50,000ರೂಪಾಯಿ ಹಣದ ಒಪ್ಪಂದ ನಡೆದಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು