News Karnataka Kannada
Sunday, May 19 2024
ವಿದೇಶ

ಪಾಕಿಸ್ತಾನದ ಸಂಸತ್ ಪ್ರವೇಶಿಸಿದ ಮೊದಲ ಹಿಂದೂ ಮಹಿಳೆ!

Photo Credit :

ಪಾಕಿಸ್ತಾನದ ಸಂಸತ್ ಪ್ರವೇಶಿಸಿದ ಮೊದಲ ಹಿಂದೂ ಮಹಿಳೆ!

ಲಾಹೋರ್: ಪಾಕಿಸ್ತಾನ ಸಂಸತ್ತಿನ ಮೇಲ್ಮನೆ ಸದಸ್ಯ ಸ್ಥಾನಕ್ಕೆ ಹಿಂದೂ ಮಹಿಳೆಯೊಬ್ಬರು ಆಯ್ಕೆಯಾಗಿರುವುದು ಪಾಕಿಸ್ತಾನದಲ್ಲಿ ಇದೇ ಮೊದಲು ಎಂದು ವರದಿಗಳು ಹೇಳಿವೆ.

ದಲಿತ ಸಮುದಾಯಕ್ಕೆ ಸೇರಿರುವ ಕೃಷ್ಣಕುಮಾರಿ ಕೊಲಿ ಎಂಬವರೇ ಈ ಸಾಧನೆ ಮಾಡಿದವರು. ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ಕೃಷ್ಣ ಕುಮಾರಿ ಅವರನ್ನು ಆಯ್ಕೆ ಮಾಡಿ ಕಳುಹಿಸಿದೆ ಎಂದು ವರದಿಗಳು ತಿಳಿಸಿವೆ.

39ರ ಹರೆಯದ ಕೊಲಿ ಅವರು ಸಿಂಧ್ ಪ್ರಾಂತ್ಯದ ಥಾರ್ ಪ್ರದೇಶಕ್ಕೆ ಸೇರಿದವರು. ಮಾರ್ಚ್ 3ರಂದು ನಡೆದ ಚುನಾವಣೆಯಲ್ಲಿ ಇವರು ಜಯ ಗಳಿಸಿರುವುದಾಗಿ ಮಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯೊಬ್ಬರು ಸಂಸದರಾಗಿ ಆಯ್ಕೆಯಾಗುತ್ತಿರುವುದು ಇದೇ ಮೊದಲು. 2009ರಲ್ಲಿ ಡಾ. ಖತುಮಾಲ್ ಜೀವನ್ ಮತ್ತು 2105ರಲ್ಲಿ ಗಯಾನ್ ಚಾಂದ್ ಅವರನ್ನು ಸಂಸದರನ್ನಾಗಿ ಪಿಪಿಪಿ ಆಯ್ಕೆ ಮಾಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು