News Karnataka Kannada
Sunday, April 28 2024
ವಿದೇಶ

ಪಾಕಿಸ್ತಾನದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಧ್ವಂಸ

Bangla 09082021
Photo Credit :

ಢಾಕಾ: ಪಾಕಿಸ್ತಾನದಲ್ಲಿ ಹಿಂದೂಗಳ ದೇವಾಲಯಗಳನ್ನು ಧ್ವಂಸ ಪ್ರಕರಣ ಮಾಡಿದ ಪ್ರಕರಣದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿಯೂ ಅಂತಹದೇ ಪ್ರಕರಣ ವರದಿಯಾಗಿದೆ.

ಅಲ್ಲಿನ ಹಿಂದೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ದೇವಾಲಯಗಳ ಧ್ವಂಸ ಮಾಡಿರುವುದು ತಿಳಿದುಬಂದಿದೆ. ಖುಲ್ನಾ ಜಿಲ್ಲೆಯಲ್ಲಿ ಕನಿಷ್ಟ 4 ದೇವಾಲಯಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಪೊಲೀಸರು 10 ಮಂದಿಯನ್ನು ಬಂಧಿಸಿದ್ದು ಪ್ರದೇಶದಲ್ಲಿ ಬಿಗಿ ಭದ್ರತೆ ಒದಗಿಸಿದ್ದಾರೆ. ಶಿಯಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶುಕ್ರವಾರದಂದು ಹಿಂದೂ ಹಾಗೂ ಮುಸಲ್ಮಾನ ನಿವಾಸಿಗಳ ನಡುವೆ ಮಾತಿನ ಚಕಮಕಿಯ ಪರಿಣಾಮ ಈ ಘಟನೆ ನಡೆದಿದೆ.

ದೇವಾಲಯಗಳಷ್ಟೇ ಅಲ್ಲದೇ 6 ಮಳಿಗೆಗಳು ಸ್ಥಳೀಯ ಹಿಂದೂ ಸಮುದಾಯದ ಎರಡು ಮನೆಗಳನ್ನೂ ಧ್ವಂಸಗೊಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು