ಲಕ್ನೋ: ಉತ್ತರ ಪ್ರದೇಶದಲ್ಲಿ ಪಂಚಾಯತ್ ಚುನಾವಣೆಗೆ ಅಲ್ಲಿನ ರಾಜ್ಯ ಚುನಾವಣಾ ಆಯೋಗವು ದಿನಾಂಕಗಳ ಘೋಷಣೆ ಮಾಡಿದೆ.
ಚುನಾವಣೆಯು ನಾಲ್ಕು ಹಂತದಲ್ಲಿ ನಡೆಯಲಿದ್ದು, ಮೊದಲ ಹಂತವು ಏಪ್ರಿಲ್ 15, ಎರಡನೇ ಹಂತ ಏಪ್ರಿಲ್ 19, ಮೂರನೇ ಹಂತ ಏಪ್ರಿಲ್ 26 ಮತ್ತು ನಾಲ್ಕನೇ ಹಂತವು ಏಪ್ರಿಲ್ 29ರಂದು ನಡೆಯಲಿದೆ.
ಮತ ಎಣಿಕೆಯು ಮೇ 2ರಂದು ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗವು ತಿಳಿಸಿದೆ.