ಬೀಜಿಂಗ್: ಚೀನಾದ ಪ್ರಸಿದ್ಧ ಸಿನಿಮಾ ಮತ್ತು ಕಿರುತೆರೆ ನಟಿ ಝೆಂಗ್ ಶುವಾಂಗ್ಗೆ ತೆರಿಗೆ ವಂಚನೆ ಆರೋಪದಡಿ ಅಲ್ಲಿನ ಸರ್ಕಾರವು ಸುಮಾರು ₹ 338 ಕೋಟಿ (46.1 ಮಿಲಿಯನ್ ಡಾಲರ್) ದಂಡ ವಿಧಿಸಿದೆ.
ಚೀನಾವು ಸಂಪತ್ತಿನ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹೊಸ ನೀತಿಯನ್ನು ಜಾರಿಗೆ ತಂದಿದ್ದು, ಈ ನೀತಿಯಡಿ ಸರ್ಕಾರವು ಸೆಲೆಬ್ರಿಟಿಗಳ ಮೇಲೆ ನಿಗಾವಹಿಸಿದೆ.
2019–2020ರ ನಡುವಿನ ಅಘೋಷಿತ ಆದಾಯ ಹಾಗೂ ತೆರಿಗೆ ವಂಚನೆ ಆರೋಪದಡಿ ನಟಿ ಝೆಂಗ್ ಶುವಾಂಗ್ಗೆ ಶಾಂಘೈ ಮುನ್ಸಿಪಲ್ ತೆರಿಗೆ ಸೇವೆಯು ಶುಕ್ರವಾರ ದಂಡ ವಿಧಿಸಿದೆ.
‘ಝೆಂಗ್ ಪ್ರಕರಣವು ಸಿನಿಮಾ ಮತ್ತು ದೂರದರ್ಶನ ಉದ್ಯಮದಲ್ಲಿ ಕಾಣಸಿಗುವ ‘ಯಿನ್ ಮತ್ತು ಯಾಂಗ್’ ಒಪ್ಪಂದದಂತಿದೆ’ ಎಂದು ಅಧಿಕಾರಿಗಳು ಹೇಳಿದರು.