News Karnataka Kannada
Friday, May 03 2024
ವಿದೇಶ

ತಾಲಿಬಾನಿಗಳಿಗೆ ಹೆದರಿ ವಿಮಾನದಿಂದ ಬಿದ್ದು ಜೀವ ಕಳೆದುಕೊಂಡ ವಿಶ್ವಖ್ಯಾತಿ ಫುಟ್ಬಾಲ್‌ ಆಟಗಾರ

Taliban
Photo Credit :

ಕಾಬುಲ್‌: ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ನಂತರ ಜೀವಭಯಕ್ಕೆ ಹೆದರಿ ವಿಮಾನದಲ್ಲಿ ಹೋಗಲು ಪ್ರಾಣವನ್ನೇ ಪಣಕ್ಕಿಟ್ಟ ವಿಡಿಯೋ ಇದಾಗಲೇ ವೈರಲ್‌ ಆಗಿತ್ತು. ಅದೇ ಬೆನ್ನಲ್ಲಿ ವಿಮಾನದ ಮೇಲ್ಬಾಗದಲ್ಲಿ ಏರಿ, ವಿಮಾನ ಮೇಲೆ ಏರಿದಾಗ ಬಿದ್ದು ನಾಲ್ವರು ಮೃತಪಟ್ಟಿರುವ ಭಯಾನಕ ವಿಡಿಯೋ ಕೂಡ ವೈರಲ್‌ ಆಗಿತ್ತು.
ದುರದೃಷ್ಟ ಎಂದರೆ, ಈ ರೀತಿ ಮೃತಪಟ್ಟಿರುವವರ ಪೈಕಿ ಒಬ್ಬ ಅಂತಾರಾಷ್ಟ್ರೀಯ ಫುಟ್‌ಬಾಲ್‌ ತಾರೆ ಝಾಕಿ ಅನ್ವರಿ. ಅಮೆರಿಕ ಸೇನಾ ವಿಮಾನದಿಂದ ಬಿದ್ದು ಮೃತನಾದವನಲ್ಲಿ ಇವನೂ ಒಬ್ಬನು ಎಂದು ತಿಳಿದುಬಂದಿದೆ. 19 ವರ್ಷದ ಝಾಕಿ ಅನ್ವರಿ ತಾಲಿಬಾನಿಗಳ ಭೀತಿಯಿಂದ ವಿಮಾನದ ಲ್ಯಾಂಡಿಂಗ್ ಗೇರ್ ಹತ್ತಿ ಜೀವ ಕಳೆದುಕೊಂಡಿರುವುದಾಗಿ ಆಫ್ಘನ್ ರಾಷ್ಟ್ರೀಯ ಫುಟ್​ಬಾಲ್ ತಂಡ ದೃಢ ಪಡಿಸಿದೆ. ಈ ಕುರಿತ ಸುದ್ದಿಯನ್ನು ತನ್ನ ಫೇಸ್​ಬುಕ್​​ ಪೇಜ್​ನಲ್ಲಿ ಹಂಚಿಕೊಂಡಿದೆ. ಆಫ್ಘಾನಿಸ್ತಾನ ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳ ನಿರ್ದೇಶನಾಲಯ ಝಾಕಿ ಅನ್ವರಿ ಸಾವನ್ನು ದೃಢಪಡಿಸಿದೆ.
ಉದಯೋನ್ಮುಖ ಆಟಗಾರನಾಗಿದ್ದ ಝಾಕಿ ಅನ್ವರಿ ಈ ಚಿಕ್ಕ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದನು ಎಂದು ಅದು ಹೇಳಿದೆ. ಆತನ ಸಾವಿಗೆ ​ಸಾರ್ವಜನಿಕರು, ಸ್ನೇಹಿತರು ಮತ್ತು ಫುಟ್​ಬಾಲ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಝಾಕಿ ಅಫ್ಘಾನಿಸ್ತಾನದ ರಾಷ್ಟ್ರೀಯ ಯುವ ತಂಡಕ್ಕೆ ಆಯ್ಕೆಯಾಗಿದ್ದು, ಇಲ್ಲಿಯವರೆಗೆ ಅನೇಕ ಪಂದ್ಯಗಳನ್ನು ಆಡಿದ್ದಾನೆ. ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತುವ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮತ್ತು ವಿಮಾನ ಹತ್ತಿದ ನಂತರ ನಡೆದ ಅವಘಡಗಳಲ್ಲಿ ಸುಮಾರು 10 ಮಂದಿ ಮೃತಪಟ್ಟಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು