News Karnataka Kannada
Monday, April 29 2024
ವಿದೇಶ

ಡಿ. 15ರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭ: 14 ದೇಶಗಳಿಗೆ ನಿರ್ಬಂಧ

Airplane
Photo Credit :

ದೇಶದಲ್ಲಿ ಕೊರೋನಾ ವೇಳೆ ಹೇರಲಾಗಿದ್ದ ಲಾಕ್‌ಡೌನ್ ಅಲ್ಲಿ ಅಂತಾರಾಷ್ಟ್ರೀಯ ವಿಮಾನವನ್ನು ನಿಷೇಧ ಮಾಡಲಾಗಿತ್ತು. ಇದೀಗ ಎರಡು ವರ್ಷಗಳ ಬಳಿಕ ನಿಯಮವನ್ನು ಸಡಿಲಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಮತ್ತೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ಶುರುವಾಗಲಿದೆ.

ಆದರೆ ಹೊಸ ಕೋವಿಡ್ ರೂಪಾಂತರದ ಹಿನ್ನೆಲೆಯಿಂದಾಗಿ 14 ದೇಶಗಳಿಗೆ ಹಳೆಯ ನಿರ್ಬಂಧವೇ ಮುಂದುವರಿಯುತ್ತಿದೆ.
ಸದ್ಯ ವಿದೇಶಗಳಿಗೆ ಬಯೋಬಬಲ್ ವ್ಯವಸ್ಥೆಯಡಿ ಮಾತ್ರ ಭಾರತದಿಂದ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಕೇಂದ್ರ ಸರ್ಕಾರವು 2021ರ ಡಿಸೆಂಬರ್ 15ರಿಂದ ಹಲವಾರು ದೇಶಗಳಿಗೆ ರೆಗ್ಯುಲರ್ ಆಗಿ ಅಂತಾರಾಷ್ಟ್ರೀಯ ವಿಮಾನಗಳು ಸಂಚರಿಸಲು ಅನುಮತಿ ನೀಡುತ್ತಿದೆ.

ಭಾರತವು ಪ್ರಸ್ತುತ ಇಂತಹ 25 ಒಪ್ಪಂದಗಳನ್ನು ಹೊಂದಿದೆ. ಏರ್‌ ಬಬಲ್‌ ವ್ಯವಸ್ಥೆಯ ಮೂಲಕ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳು ಒಪ್ಪಂದ ಮಾಡಿಕೊಂಡಿರುವ ದೇಶಗಳ ನಡುವೆ ಕೆಲವು ಷರತ್ತುಗಳೊಂದಿಗೆ ಹಾರಾಟ ನಡೆಸು‌ತ್ತದೆ.
ಆದರೆ ಈಗ ಎಲ್ಲಾ ನಿರ್ಬಂಧವನ್ನು ಸಡಿಲಿಕೆ ಮಾಡಿರುವ ಕೇಂದ್ರ ಸರ್ಕಾರವು 14 ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳಿಂದ ಅಂತಾರಾಷ್ಟ್ರೀಯ ವಿಮಾನವನ್ನು ಸಹಜ ಸ್ಥಿತಿಗೆ ತರಲಾಗುತ್ತದೆ ಎಂದು ಹೇಳಿದೆ.

ಯಾವೆಲ್ಲಾ ದೇಶಗಳಿಗೆ ನಿರ್ಬಂಧ?
ಯುಕೆ, ಫ್ರಾನ್ಸ್‌, ಜರ್ಮನಿ, ನೆದರ್‌ಲ್ಯಾಂಡ್‌, ಫಿನ್‌ಲ್ಯಾಂಡ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಚೀನಾ, ಮಾರಿಷಸ್, ನ್ಯೂಜಿಲ್ಯಾಂಡ್‌, ಸಿಂಗಾಪುರ, ಬಾಂಗ್ಲಾದೇಶ, ಬೋಟ್ಸ್ವಾನ, ಜಿಂಬಾವೆ ದೇಶಗಳಿಗೆ ನಿರ್ಬಂಧ ವಿಧಿಸಲಾಗಿದೆ. ಉಳಿದ ಎಲ್ಲಾ ದೇಶಗಳಿಂದ ನಿಯಮಿತ ಅಂತಾರಾಷ್ಟ್ರೀಯ ವಿಮಾನಗಳು ಭಾರತಕ್ಕೆ ಹಾರಾಟ ನಡೆಸಲು ಅನುಮತಿ ನೀಡಲಾಗಿದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು