ಜಪಾನ್ : ತಡರಾತ್ರಿ ಜಪಾನ್ ನ ಟೋಕಿಯೋದಲ್ಲಿ 5.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, 17 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟೋಕಿಯೋದ ಪೂರ್ವ ದಿಕ್ಕಿನ 80 ಕಿ.ಮೀ. ಆಳದಲ್ಲಿ ಭೂಕಂಪನ ಕೇಂದ್ರ ಗುರುತಿಸಲಾಗಿದೆ ಎಂದು ಭೂವಿಜ್ಞಾನ ಸಂಸ್ಥೆ ತಿಳಿಸಿದೆ. ಈ ವೇಳೆ ಹಲವು ಕಟ್ಟಡಗಳಲ್ಲಿ ಭೂಕಂಪನದ ಅನುಭವವಾಗಿದೆ.
ಭೂಕಂಪನದ ವೇಳೆ ಚಲಿಸುತ್ತಿದ್ದ ರೈಲು ಭಾಗಶಃ ಹಳಿ ತಪ್ಪಿದ ವೇಳೆ ತುರ್ತು ನಿಲುಗಡೆ ಮಾಡುವ ವೇಳೆ ರೈಲಿನೊಳಗಿದ್ದ ಪ್ರಯಾಣಿಕರು ಬಿದ್ದು ಗಾಯಗೊಂಡಿದ್ದಾರೆ. ಈ ವೇಳೆ ಯಾವುದೇ ಭಾರೀ ಪ್ರಮಾಣದ ಹಾನಿ ಸಂಭವಿಸಿಲ್ಲ ಎಂದು ಪ್ರಧಾನ ಸಂಪುಟ ಕಾರ್ಯದರ್ಶಿ ಹಿರೊಕಜು ಮಟ್ಸುನೊ ಹೇಳಿದ್ದಾರೆ.
ಟೋಕಿಯೋದ ಹಲವೆಡೆ ನೆಲದಡಿಯಲ್ಲಿರುವ ನೀರಿನ ಪೈಪ್ ಹಾನಿಯಾಗಿದ್ದು, ಸುಮಾರು 250 ಮನೆಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. 2011ರ ಬಳಿಕ ನಡೆದಿರುವ ತೀವ್ರ ಭೂಕಂಪ ಇದಾಗಿದ್ದು, ಜನರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ತಿಳಿಸಿದ್ದಾರೆ.