News Karnataka Kannada
Sunday, May 12 2024
ವಿದೇಶ

ಹೈಟಿ ದೇಶದಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 724ಕ್ಕೆ ಏರಿದೆ

File Photo: Hundreds Killed In Magnitude 7.2 Quake In Haiti
Photo Credit :

ಜೆರೆಮಿ: ಹೈಟಿ ದೇಶದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 724ಕ್ಕೆ ಏರಿದೆ. ಪರಿಸ್ಥಿತಿಯ ಗಾಂಭೀರ್ಯ ಅರಿತ ಪ್ರಧಾನಿ ಏರಿಯಲ್ ಹೆನ್ರಿ ಒಂದು ತಿಂಗಳ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.

ಸುಮಾರು 2 ಲಕ್ಷ ಜನರು ವಾಸಿಸುವ ಜೆರೆಮಿ ನಗರದಲ್ಲಿ ತೀವ್ರ ಸ್ವರೂಪದ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಂತೆ ಪತ್ತೆಯಾಗುತ್ತಿರುವ ಶವಗಳ ಸಂಖ್ಯೆ ಹೆಚ್ಚುತ್ತಿದೆ. ಧರೆಗೆ ಉರುಳಿರುವ ಕಟ್ಟಡಗಳ ಅವಶೇಷಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.

ಹೈಟಿ ರಾಜಧಾನಿ ಪೋರ್ಟ್-ಅವು-ಪ್ರಿನ್ಸ್​ನ ಪಶ್ಚಿಮಕ್ಕೆ 160 ಕಿಮೀ ದೂರದಲ್ಲಿ ಸಂಭವಿಸಿದ ಭೂಕಂಪದಿಂದ ವ್ಯಾಪಕ ಹಾನಿಯಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.2ರಷ್ಟು ದಾಖಲಾಗಿತ್ತು. ಚರ್ಚ್​ಗಳು, ಅಂಗಡಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಮನೆಗಳು ಕುಸಿದುಬಿದ್ದಿವೆ. 2,800 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವ ನತದೃಷ್ಟರನ್ನು ರಕ್ಷಿಸುವ ಕಾರ್ಯಾಚರಣೆ ಸಾಗಿದೆ.

ಜೆರೆಮಿ ನಗರದಲ್ಲಿ ಭೂಕಂಪದ ತೀವ್ರತೆ ಹೆಚ್ಚಾಗಿತ್ತು. ಆದರೆ ಒಂದು ಅಂತಸ್ತಿನ ಮನೆಗಳೇ ಹೆಚ್ಚಿನ ಪ್ರಮಾಣದಲ್ಲಿದ್ದ ಕಾರಣ ಸಾವುನೋವಿನ ಪ್ರಮಾಣ ಇತರೆಡೆಗಳಿಗಿಂತ ಕಡಿಮೆಯಿದೆ. ಲೆಸ್ ಕೆಯೆಸ್ ನಗರದಲ್ಲಿ ಬಹುಅಂತಸ್ತಿನ ಹೊಟೆಲ್ ಉರುಳಿದ್ದು, ಸಾವುನೋವು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು