News Karnataka Kannada
Saturday, May 04 2024
ವಿದೇಶ

ಜಿಎಸ್ ಟಿ: ಕರ್ನಾಟಕಕ್ಕೆ ₹ 8,542 ಕೋಟಿ ಕೇಂದ್ರದಿಂದ ಬಿಡುಗಡೆ

Gst 16072021
Photo Credit :

ನವದೆಹಲಿ: ಜಿಎಸ್‌ಟಿ ಪರಿಹಾರದ ಬದಲು ₹ 75,000 ಕೋಟಿ ‘ಬ್ಯಾಕ್-ಟು-ಬ್ಯಾಕ್ ಸಾಲ ಸೌಲಭ್ಯ’ ಅಡಿಯಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆದಾಯದ ಕೊರತೆ ಮತ್ತು ಆರ್ಥಿಕತೆಯ ಮೇಲೆ ಅದರ ಪ್ರಭಾವದಿಂದಾಗಿ ಜಿಎಸ್ ಟಿ ಸಂಗ್ರಹದಲ್ಲಿನ ನಷ್ಟವನ್ನು ಸಾಲ ಸೌಲಭ್ಯ ಸರಿದೂಗಿಸುವ ನಿರೀಕ್ಷೆಯಿದೆ.

ಮೊದಲ ಕಂತಾಗಿ ಕರ್ನಾಟಕ ₹ 8,542.17 ಕೋಟಿ ಸ್ವೀಕರಿಸಿದೆ. ಸೆಸ್ ಸಂಗ್ರಹದಲ್ಲಿ ರಾಜ್ಯಗಳಿಗೆ ಪ್ರತಿ ಎರಡು ತಿಂಗಳಿಗೊಮ್ಮೆ ನಿಯಮಿತವಾಗಿ ಜಿಎಸ್ಟಿ ಪರಿಹಾರವನ್ನು ಬಿಡುಗಡೆ ಜೊತೆಗೆ ಹೆಚ್ಚುವರಿಯಾಗಿ ಈ ಹಣವನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.

ಮೇ ತಿಂಗಳಲ್ಲಿ ನಡೆದ 43ನೇ ಜಿಎಸ್ ಟಿ ಸಲಹಾ ಸಭೆಯಲ್ಲಿ ಕೇಂದ್ರ ಸರ್ಕಾರ 1.59 ಲಕ್ಷ ಕೋಟಿ ಸಾಲ ಪಡೆದು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು