ಟೊಕಿಯೊ: ಕೊರೊನಾ ರೂಪಾಂತರಗಳು ಎಲ್ಲರ ನಿದ್ದೆಗೆಡಿಸಿದ್ದು, ಬೇರೆ ಬೇರೆ ದೇಶಗಳಲ್ಲಿ ಹೊಸ ಅವತಾರ ಎತ್ತುತ್ತಲೇ ಸಾಗಿದೆ. ಒಂದೆಡೆಗೆ ಬ್ರಿಟನ್ನಲ್ಲಿ ರೂಪಾಂತರಿ ಕೊರೊನಾ ಸುದ್ದಿ ಮಾಡುತ್ತಿದ್ದಾರೆ, ಇದೀಗ ಜಪಾನ್ನಲ್ಲಿ ಕೊರೊನಾದ ಹೊಸ ವೈರಸ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ, ಜಪಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್’, ಬ್ರಿಟನ್ ಮಾದರಿಯಲ್ಲಿಯೇ ಆದರೆ ಹೊಸ ರೂಪದಲ್ಲಿ ಜಪಾನ್ನಲ್ಲಿ ಕೂಡ ಕೊರೊನಾ ವೈರಸ್ ಹೊಸ ಆವೃತ್ತಿ ಪತ್ತೆಯಾಗಿದೆ. ಹೊಸ ರೂಪಾಂತರ ಕೋರೋನ ಬ್ರೆಝಿಲ್ನಿಂದ ಬಂದ ನಾಲ್ವರು ಪ್ರಯಾಣಿಕರಲ್ಲಿ ಪತ್ತೆಯಾಗಿರುವುದಾಗಿ ಎಂದು ಜಪಾನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಹೊಸ ರೂಪಾಂತರ ಕೊರೊನ ಕುರಿತು ಜಪಾನ್ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಈ ವೈರಸ್ ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾಕ್ಕಿಂತ ಭಿನ್ನವಾದದ್ದೋ ಅಥವಾ ಅದೇ ವೈರಸ್ ಇಲ್ಲಿಯೂ ಪತ್ತೆಯಾಗಿದೆಯೋ ಎಂಬ ಬಗ್ಗೆ ಇನ್ನಷ್ಟೇ ಪ್ರಯೋಗಾಲಯದಿಂದ ವರದಿ ಬರಬೇಕಿದೆ. ಆದರೆ ಮೇಲ್ನೋಟಕ್ಕೆ ಇದೊಂದು ಹೊಸ ಮಾದರಿಯ ಕೊರೊನಾ ಇರಬಹುದು ಎಂಬ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅದರಂತೆ ಜಪಾನ್ ಆರೋಗ್ಯ ಸಚಿವಾಲಯ ಕೂಡ ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿದ್ದು, ಜ.2ರಂದು ಬ್ರೆಝಿಲ್ನಿಂದ ಜಪಾನ್ ಹನೇಡಾ ವಿಮಾನ ನಿಲ್ದಾಣಕ್ಕೆ ಬಂದಿರುವ ನಾಲ್ವರು ಪ್ರಯಾಣಿಕರಲ್ಲಿ ಹೊಸ ರೂಪದ ವೈರಸ್ ಕಾಣಿಸಿಕೊಂಡಿದೆ. ಈ ಪೈಕಿ 40 ವರ್ಷದ ಪುರುಷನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದೆ.