News Karnataka Kannada
Sunday, May 12 2024
ವಿದೇಶ

ಚೀನಾ : ತೀವ್ರ ಮಳೆ, ಪ್ರವಾಹದಿಂದಾಗಿ 1.76 ದಶಲಕ್ಷಕ್ಕೂ ಹೆಚ್ಚು ಮಂದಿಗೆ ಸಂಕಷ್ಟ

China Rain
Photo Credit :

ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ತೀವ್ರ ಮಳೆ, ಪ್ರವಾಹದಿಂದಾಗಿ 1.76 ದಶಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟ ಅನುಭವಿಸಿದ್ದಾರೆ. ಒಟ್ಟಾರೆ 1,20,100 ಮಂದಿಯನ್ನು ಸ್ಥಳಾಂತರಿಸಲಾಗಿದ್ದು, 189,973 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ.

ಭಾರೀ ಮಳೆಯಿಂದಾಗಿ 17,೦೦೦ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ ಎಂದು ವರದಿಯಾಗಿದೆ. ಅ.2 ರಿಂದ ಗುರುವಾರದವರೆಗೆ ಸರಾಸರಿ 119.5. ಮಿ.ಮೀ ಮಳೆಯಾಗಿದ್ದು, ಹದಿನೆಂಟು ಪ್ರದೇಶಗಳಲ್ಲಿ 200 ಮಿ.ಮೀಗಿಂತಲೂ ಹೆಚ್ಚಿನ ಮಳೆಯಾಗಿದೆ.

51 ಪ್ರದೇಶಗಳಲ್ಲಿ100-200 ಮಿ.ಮೀಯಷ್ಟು ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ಥವಾಗಿದೆ. ಕೆಲವೇ ದಿನಗಳಲ್ಲಿ 285.2. ಮಿ.ಮೀ ಗರಿಷ್ಠ ಮಳೆ ದಾಖಲಾಗಿದೆ.

ಶಾಂಕ್ಸಿ ಪ್ರಾಂತ್ಯದ ರಾಜಧಾನಿ ತೈಯುವಾನ್‌ನಲ್ಲಿ ಸರಾಸರಿ 185.6.ಮಿ.ಮೀ ಮಳೆ ಸುರಿದಿದ್ದು, 1981ರಿಂದ 2010 ರವರೆಗೆ ತೈಯುವಾನ್‌ನಲ್ಲಿ ಸುರಿದ ಮಾಸಿಕ ಮಳೆ ಸುಮಾರು 25 ಮಿ.ಮೀ ಆಗಿದೆ. ಲಿನ್ಫೆನ್, ಲುಲಿಯಾಂಗ್, ಝಿನ್‌ಜೌ ನಗರಗಳಲ್ಲಿ ಅಕ್ಟೋಬರ್‌ನಲ್ಲಿ ಹಿಂದಿನ ವರ್ಷಗಳಲ್ಲಿ ಸರಾಸರಿ 50 ಮಿ.ಮೀಗಿಂತ ಕಡಿಮೆ ಮಳೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು