ಅಫ್ಘಾನಿಸ್ತಾನ : ಸಂಪೂರ್ಣವಾಗಿ ಇಸ್ಲಾಮಿಕ್ ರಾಷ್ಟ್ರವಾಗಿರುವ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಶರಿಯಾ ಕಾನೂನು ಜಾರಿಗೊಳಿಸಿ ಕ್ರೀಡೆಯನ್ನು ಮಹಿಳೆಯರಿಗೆ ನಿಷೇಧಿಸಿದೆ. ಈಗಾಗಲೇ ಶಾಲೆಗಳಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ತರಗತಿ ನಡೆಸುವ ಬಗ್ಗೆ ನಿಯಮ ಜಾರಿಗೊಳಿಸಿದ ತಾಲಿಬಾನ್ ಈಗ ಮತ್ತೊಂದು ನಿಯಮ ತಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್, ಹೌದು, ಕ್ರಿಕೆಟ್ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಹೆಣ್ಣು ಮಕ್ಕಳ ದೇಹ ಪ್ರದರ್ಶನವಾಗುತ್ತದೆ. ಮಹಿಳೆಯರನ್ನು ಇಸ್ಲಾಂ ಈ ರೀತಿ ನೋಡುವುದನ್ನು ವಿರೋಧಿಸುತ್ತದೆ ಎಂದರು.
ಕ್ರೀಡೆಗಳಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯಲಾಗುತ್ತದೆ. ಈ ರೀತಿಯಾದಂತಹ ಫೋಟೋಗಳಲ್ಲಿ ಇಸ್ಲಾಮಿಕ್ ಎಮಿರೇಟ್ ಮಹಿಳೆಯರು ಕಾಣಿಸುವುದು ಸೂಕ್ತವಲ್ಲ ಈ ನಿಟ್ಟಿನಲ್ಲಿ ಕ್ರಿಕೆಟ್ ಸೇರಿದಂತೆ ಇತರೆ ದೇಹ ಪ್ರದರ್ಶನವವಾಗುವ ಕ್ರೀಡೆಗಳಲ್ಲಿ ಮಹಿಳೆಯರು ಭಾಗವಹಿಸುವಂತಿಲ್ಲ ಎಂದು ತಾಲಿಬಾನ್ ತಿಳಿಸಿದೆ.