News Karnataka Kannada
Friday, May 10 2024
ವಿದೇಶ

ಕೃಷಿ ಪ್ರತಿಭಟನೆಯ ವೈರಲ್ ವಿಡಿಯೋಗಳ ಮೂಲ ಹುಡುಕಿ ಹೊರಟ ದೆಹಲಿ ಪೊಲೀಸ್

Photo Credit :

ಕೃಷಿ ಪ್ರತಿಭಟನೆಯ ವೈರಲ್ ವಿಡಿಯೋಗಳ ಮೂಲ ಹುಡುಕಿ ಹೊರಟ ದೆಹಲಿ ಪೊಲೀಸ್

ನವದೆಹಲಿ: ಭಾರತದಾದ್ಯಂತ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡಿ ವೈರಲ್ ಆಗಿರುವ ಟೂಲ್ ಕಿಟ್ ದಾಖಲೆಗಳು ಎಲ್ಲಿಂದ ಬಂದವು ಎಂಬುದರ ಬಗ್ಗೆ ಪತ್ತೆ ಮಾಡಲು ಹೊರಟಿರುವ ದೆಹಲಿ ಪೊಲೀಸ್ ಅದರ ಐಪಿ ವಿಳಾಸ (ಇಂಟರ್ನೆಟ್ ಪ್ರೊಟೊಕಾಲ್)ವೇನು ಎಂದು ಗೂಗಲ್ ಗೆ ಪತ್ರ ಬರೆಯುವಂತೆ ನಿರ್ದೇಶಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಮಲಗಿರುವ ವಿಡಿಯೋಗಳ ಮೂಲ ಲೇಖಕರು, ಕರ್ತೃ ಯಾರು, ಅದು ಎಲ್ಲಿಂದ ಹುಟ್ಟಿಕೊಂಡಿತು ಎಂದು ಗುರುತಿಸಲು ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಈ ಟೂಲ್ ಕಿಟ್ ದಾಖಲೆಗಳು ಎಲ್ಲಿ ಸಿಕ್ಕಿದವು, ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡಿದ್ದು ಹೇಗೆ ಎಂದು ಐಪಿ ವಿಳಾಸ ತಿಳಿಯಲು ಗೂಗಲ್ ಗೆ ಬರೆಯುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಪೊಲೀಸ್ ವಿಶೇಷ ಆಯುಕ್ತ ಪ್ರವೀರ್ ರಂಜನ್, ಟೂಲ್ ಕಿಟ್ ದಾಖಲೆಗಳನ್ನು ತಯಾರಿಸಿದವರ ವಿರುದ್ಧ ಕೇಸು ದಾಖಲಿಸಲಾಗಿದ್ದು, ಎಫ್‌ಐಆರ್ ನಲ್ಲಿ ಯಾರ ಹೆಸರನ್ನೂ ದಾಖಲಿಸಿಲ್ಲ. ಟೂಲ್ ಕಿಟ್ ತಯಾರಿಸಿದವರ ವಿರುದ್ಧ ಮಾತ್ರ ನಮ್ಮ ಆಕ್ಷೇಪವಿದ್ದು ಆ ಬಗ್ಗೆ ವಿಚಾರಣೆ ನಡೆಯಲಿದೆ. ದೆಹಲಿ ಪೊಲೀಸರು ಈ ಪ್ರಕರಣದ ತನಿಖೆ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು