ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಬಾಂಗ್ಲಾದೇಶ ಪ್ರವಾಸಕ್ಕಾಗಿ ಇಂದು ಬೆಳಗ್ಗೆ ಢಾಕಾಗೆ ತೆರಳಿದರು.
ಬೆಳಗ್ಗೆ 7.45ಕ್ಕೆ ಅವರು ಇಲ್ಲಿಂದ ತೆರಳಿದ್ದು, 10 ಗಂಟೆಗೆ ಢಾಕಾ ತಲುಪಿರುವರು. ಈ ಐತಿಹಾಸಿಕ ಪ್ರವಾಸದ ವೇಳೆ ಪ್ರಧಾನಿ ಅವರು ಎರಡು ರಾಷ್ಟ್ರಗಳ ನಡುವಿನ ಸಹಕಾರದ ಬಗ್ಗೆ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳುವರು.
ಇಂದು ಮತ್ತು ನಾಳೆ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವರು.