ಇಸ್ರೇಲ್: ಇಸ್ರೇಲ್ ನ ಯಾವ್ನೆಯಲ್ಲಿ ಉತ್ಖನನ ಮಾಡುವಾಗ ಪುರಾತತ್ವ ಇಲಾಖೆಗೆ 1,000 ವರ್ಷಗಳ ಹಳೆಯ ಕೋಳಿ ಮೊಟ್ಟೆ ದೊರಕಿದೆ.
ಈ ಕುರಿತು ಅಧ್ಯಯನ ನಡೆಸಿದ ವಿಜ್ಞಾನಿಗಳು ಅದು ಬೈಜಾಂಟೈನ್ ಯುಗದ ಮೊಟ್ಟೆ ಎಂದು ಅಭಿಪ್ರಾಯಪಟ್ಟಿದ್ದಾರೆ . ಮೊಟ್ಟೆ ಸುಮಾರು 6 ಸೆ.ಮೀನಷ್ಟು ಉದ್ದವಿದ್ದು , ಶೆಲ್ ಬಳಿ ಕೆಲವು ಬಿರುಕು ಮಾತ್ರ ಕಾಣಿಸಿಕೊಂಡಿದೆ . ಮೊಟ್ಟೆಯ ಹಳದಿ ಭಾಗ ಇನ್ನು ಹಾಗೆ ಇದ್ದು , ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ . ಮೊಟ್ಟೆಯ ಚಿತ್ರಗಳನ್ನು ಫೇಸ್ಬುಕ್ನಲ್ಲಿ ಇಸ್ರೇಲ್ ಆಂಟಿಕ್ವಿಟೀಸ್ ಪ್ರಾಧಿಕಾರ ಹಂಚಿಕೊಂಡಿದೆ .
ಈ ಕುರಿತು ಹೆಚ್ಚಿನ ಅಧ್ಯಯನ ನಡೆಯುತ್ತಿದ್ದು, ಸದ್ಯ ಜಗತ್ತಿನೆಲ್ಲೆಡೆ ಈ ಮೊಟ್ಟೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.