News Karnataka Kannada
Friday, May 03 2024
ವಿದೇಶ

ಆಸ್ಟ್ರೇಲಿಯದಲ್ಲಿ ಲೀಥಿಯಂ ಮತ್ತು ಕೊಬಾಲ್ಟ್ ಗಣಿಗಾರಿಕೆ ಮಾಡಲಿದೆ ಭಾರತ!

Australia India
Photo Credit :

ಲೀಥಿಯಂ ಮತ್ತು ಕೊಬಾಲ್ಟ್ ಇವೆರಡೂ ಖನಿಜಗಳೂ ಬ್ಯಾಟರಿ ತಯಾರಿಕೆಯಲ್ಲಿ ಬೇಕಾಗುವ ವಸ್ತುಗಳು. ಚೀನಾವೇ ಪಾರಮ್ಯ ಸಾಧಿಸಿರುವ ಈ ಮಾರುಕಟ್ಟೆಯಲ್ಲಿ ಯಾವುದೇ ದೇಶ ತನ್ನ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳದ ಹೊರತೂ ಲೀಥಿಯಂ-ಆಧರಿತ ಬ್ಯಾಟರಿ ನಂಬಿಕೊಂಡು ವಿದ್ಯುತ್ ಚಾಲಿತ ವಾಹನಗಳ ಕ್ರಾಂತಿ ಮಾಡುತ್ತೇವೆ ಎಂದು ಹೇಳಲಾಗುವುದಿಲ್ಲ.

ವಾಹನೋದ್ಯಮ, ಕೆಲ ಲೋಹಗಳಲ್ಲಿ ಸವಕಳಿ ತಡೆಯುವ ಸಾಧನವಾಗಿಯೂ ಕೊಬಾಲ್ಟ್ ನ ಬೇರೆ ಬೇರೆ ಉಪಯೋಗಗಳಿವೆ. ಇದೀಗ, ಆಸ್ಟ್ರೇಲಿಯದ ಲೀಥಿಯಂ ಮತ್ತು ಕೊಬಾಲ್ಟ್ ಗಣಿಗಳಲ್ಲಿ ಗಣಿಗಾರಿಕೆ ನಡೆಸುವ ಗುತ್ತಿಗೆಯನ್ನು ಭಾರತ ಪಡೆಯುತ್ತಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿರುವುದು ಈ ನಿಟ್ಟಿನಲ್ಲಿ ಒಂದು ಸ್ಪರ್ಧಾತ್ಮಕ ಬೆಳವಣಿಗೆಯಾಗಿದೆ.

ಈ ನಿಟ್ಟಿನಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ‘ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್’, ಆಸ್ಟ್ರೇಲಿಯದ ‘ಕ್ರಿಟಿಕಲ್ ಮಿನರಲ್ಸ್ ಫೆಸಿಲಿಟೇಶನ್ ಆಫೀಸ್’ ಜತೆ ಪ್ರಾರಂಭಿಕ ಒಪ್ಪಂದವನ್ನು ಮಾಡಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು