News Karnataka Kannada
Monday, April 29 2024
ಅಂಕಣ

ಬೇಸಿಗೆಯಲ್ಲಿ ಹೀಗಿರಲಿ ನಿಮ್ಮ ಆಹಾರ ಪದ್ಧತಿ

Swathi Column (31 004 2022)
Photo Credit :

ಬಿರು ಬೇಸಿಗೆ ಈಗಾಗಲೇ ಆರಂಭವಾಗಿದೆ. ಬಿಸಿಲು, ತಾಪಮಾನ, ಶೆಕೆ, ಬೆವರು, ಡೀಹೈಡ್ರೇಷನ್ ಅಂತೆಲ್ಲಾ ಹಲವು ಕಿರಿಕಿರಿಯನ್ನು ಬೇಸಿಗೆಯಲ್ಲಿ ಅನುಭವಿಸುತ್ತೇವೆ. ಹಾಗಾದರೆ ಈ ಸೀಸನ್ ಅನ್ನು ಕೂಡ ನಾವು ಎಂಜಾಯ್ ಮಾಡಲು ಕೆಲವು ರೊಟೀನ್‌ಗಳನ್ನು ಅನುಸರಿಸಬೇಕಾಗುತ್ತದೆ.

ಹೆಚ್ಚು ಹೆಚ್ಚು ಊಟ, ಉಪಾಹಾರದ ಬದಲಿಗೆ ಲೈಟ್ ಆಹಾರವನ್ನು ಸೇವಿಸಿ. ರಾತ್ರಿ ಊಟ ಹೊಟ್ಟೆ ಬಿರಿಯುವಂತೆ ಮಾಡಬೇಡಿ. ಫೈಬರ್‌ನಲ್ಲಿ ಸಮೃದ್ಧವಾಗಿರುವ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರಗಳ ಮೇಲೆ ನಿಗಾ ವಹಿಸಿ ಮತ್ತು ನೈಸರ್ಗಿಕವಾಗಿ ಉಷ್ಣ ಹೊಂದಿರುವ ಪಪ್ಪಾಯಿಗಳು, ದ್ರಾಕ್ಷಿಹಣ್ಣುಗಳು, ಬಿಳಿಬದನೆ, ಈರುಳ್ಳಿ ಮತ್ತು ಪಾಲಕ್ ಮುಂತಾದ ತರಕಾರಿಗಳಿಂದ ದೂರವಿರಿ.

ಇವುಗಳ ಬದಲಿಗೆ ಸೇಬುಗಳು, ಪೇರಳೆಗಳು, ಸ್ಟ್ರಾಬೆರಿಗಳು, ಸೌತೆಕಾಯಿಗಳು, ಕೋಸುಗಡ್ಡೆ, ಲೆಟಿಸ್, ಕಪ್ಪು ಕಣ್ಣಿನ ಬಟಾಣಿ, ಮಜ್ಜಿಗೆ ಮತ್ತು ಮೊಸರುಗಳನ್ನು ಸೇವಿಸಿ. ಬೇಸಿಗೆಯಲ್ಲಿ ಎಳನೀರು, ಕಲ್ಲಂಗಡಿ ಜ್ಯೂಸ್‌ನಂತಹ ಪಾನೀಯಗಳನ್ನು ಸೇವಿಸುವ ಮೂಲಕ ಲವಣಗಳು ಮತ್ತು ಖನಿಜಗಳನ್ನು ಪಡೆದುಕೊಳ್ಳಿ. ತರಕಾರಿ, ಸೊಪ್ಪು, ಹಣ್ಣುಗಳ ಸೇವನೆ ಯಥೇಚ್ಚವಾಗಿರಲಿ. ಮಾಂಸಾಹಾರ ಸೇವಿಸುವುದಾದರೆ ಮಿತಿಯಿರಲಿ.

ಹೈಡ್ರೇಟೆಡ್ ಆಗಿರಿ ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ದೇಹದಲ್ಲಿನ ನೀರಿನ ಅಂಶವನ್ನು ಕಳೆದುಕೊಳ್ಳುತ್ತೇವೆ. ಇದರಿಂದಾಗಿ ಡೀಹೈಡ್ರೇಷನ್ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ 2-3 ಲೀಟರ್ ನೀರು ಕುಡಿಯಿರಿ. ಹೊರಗಡೆ ಹೊರಡುವಾಗ ಎಲ್ಲಿಗೆ ಹೊರಟರೂ ನೀರಿನ ಬಾಟಲ್ ಮರೆಯದೆ ಕೊಂಡೊಯ್ಯಿರಿ. ಪ್ರಿಸರ್ವೇಟೀವ್ಸ್‌ ಇರುವ ಕೂಲ್‌ಡ್ರಿಂಕ್ಸ್‌ ಆವಾಯ್ಡ್ ಮಾಡಿ. ಆದಷ್ಟು ಬೇಸಿಗೆಯಲ್ಲಿ ಸಿಗುವ ಹಣ್ಣಿನ ಪಾನೀಯಗಳನ್ನು, ಹಣ್ಣುಗಳನ್ನು ಸೇವನೆ ಮಾಡಿ. ಹೆಚ್ಚು ನೀರು ಸೇವನೆ ನಿರ್ಜಲೀಕರಣವನ್ನು ತಡೆಯಲು ಸಹಕಾರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4283
Swathi M G

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು