ಸ್ಪಾನಿಷ್ ಕ್ಯಾನರಿ ದ್ವೀಪವಾದ ಲಾ ಪಾಲ್ಮಾದಲ್ಲಿ ಜ್ವಾಲಾಮುಖಿ ಸ್ಫೋಟವಾಗಿದ್ದು, ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.
50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟವಾಗಿದ್ದು, ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ.
ಜ್ವಾಲಾಮುಖಿಯಿಂದಾಗಿ ಮನೆ, ಸ್ವಿಮ್ಮಿಂಗ್ ಪೂಲ್ ಧ್ವಂಸಗೊಳ್ಳುವ ವಿಡಿಯೋ ಇದೀಗ ವೈರಲ್ ಆಗಿದೆ.
ಆರಂಭದಲ್ಲಿ ಲಾವಾ ಗಾಳಿಯಲ್ಲಿ ಹಾರುವ ವಿಡಿಯೋವೊಂದು ವೈರಲ್ ಆಗಿತ್ತು. ಲಾವಾ ಕರಗಿ ಮನೆಗಳಿಗೆ ತೋಟಗಳಿಗೆ ನುಗ್ಗತೊಡಗಿತು. ಇದೀಗ ಮನೆ, ಸ್ವಿಮ್ಮಿಂಗ್ ಪೂಲ್ಗೆ ಲಾವಾ ನುಗ್ಗುತ್ತಿದೆ. ಭೂಕಂಪದ ಚಟುವಟಿಕೆಯ ಒಂದು ವಾರದ ನಂತರ ಜ್ವಾಲಾಮುಖಿ ಸ್ಫೋಟಗೊಂಡಿದೆ. ಅಧಿಕಾರಿಗಳು ಜನರನ್ನು ಸ್ಥಳಾಂತರಿಸುತ್ತಿದ್ದು, ಜ್ವಾಲಾಮುಖಿ ನೋಡಲು ಹಿಂದುಳಿಯದಂತೆ ಮನವಿ ಮಾಡಿದ್ದಾರೆ.