ತಾಲಿಬಾನ್ ಆಡಳಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಭಾರತೀಯ ನಾಗರಿಕನ ಅಪಹರಣವಾಗಿದ್ದು, ಈ ಸಂಬಂಧ ತಾಲಿಬಾನ್ ಸರ್ಕಾರದೊಡನೆ ಭಾರತ ಸಂಪರ್ಕದಲ್ಲಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ವಿದೇಶಾಂಗ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದು, ನಾವು ಭಾರತೀಯ ನಾಗರಿಕನ ಅಪಹರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಪರಿಸ್ಥಿತಿಯ ಮೇಲೆ ನಿಗಾ ವಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮಂಗಳವಾರ ಬಾನ್ಸ್ರಿಲಾಲ್ ಅರೆಂದೆಹ್ ಎಂಬುವವರನ್ನು ಕಾಬೂಲ್ ನಲ್ಲಿ ಬಂದೂಕು ತೋರಿಸಿ ಅಪಹರಿಸಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆದರೆ ಅವರ ಪೌರತ್ವದ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಬಾಗ್ಚಿ ಹೇಳಿದ್ದಾರೆ.
ಅರೆಂದೆಹ್ ಕಳೆದ 2 ದಶಕಗಳಿಂದ ವ್ಯಾಪಾರಕ್ಕೆಂದು ಕಾಬೂಲ್ ನಲ್ಲಿ ವಾಸವಾಗಿದ್ದು, ಅವರ ಕುಟುಂಬ ಭಾರತದ ಹರಿಯಾಣದಲ್ಲಿ ನೆಲೆಸಿದೆ ಎಂದರು.