News Karnataka Kannada
Monday, May 06 2024
ವಿದೇಶ

ಕಾಬೂಲ್‍ ಸರಣಿ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿಕೆ

Bombblast 27082021
Photo Credit :

ಕಾಬೂಲ್ ; ಆಫ್ಘಾನಿಸ್ತಾನದ ಕಾಬೂಲ್‍ನಲ್ಲಿ ನಿನ್ನೆ ಸಂಭವಿಸಿದ ಸರಣಿ ಸ್ಪೋಟದಲ್ಲಿ ಸಾವನಪ್ಪಿದವರ ಸಂಖ್ಯೆ 105 ಕ್ಕೆ ಏರಿಕೆಯಾಗಿದೆ. ಸ್ಥಳೀಯ ಮಾಧ್ಯಮಗಳು 80ಕ್ಕೂ ಹೆಚ್ಚು ಸಾವುಗಳು ಸಂಭವಿಸಿದೆ ಎಂದು ತಾಲಿಬಾನ್ ನಾಯಕರನ್ನು ಉಲ್ಲೇಖಿಸಿ ವರದಿ ಮಾಡುತ್ತಿವೆ. ಆದರೆ, ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ವಿವಿಧ ಮೂಲಗಳನ್ನು ಆಧರಿಸಿ ಸಾವಿನ ಸಂಖ್ಯೆಯನ್ನು 105 ಎಂದು ಘೋಷಿಸಿವೆ.
90 ಮಂದಿ ಆಫ್ಘಾನ್ ಪ್ರಜೆಗಳು, 13 ಮಂದಿ ಅಮೆರಿಕದ ಯೋಧರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಎರಡು ಮಾನವ ಬಾಂಬ್‍ಗಳೂ ಸ್ಪೋಟಿಸಿದ್ದರಿಂದ ಭೀಕರ ಸನ್ನಿವೇಶ ಸೃಷ್ಟಿಯಾಗಿದ್ದು, ಮಾನವ ಅಂಗಾಂಗಳು ಆಕಾಶದಲ್ಲಿ ಹಾರಾಡುತ್ತಿದ್ದವು ಎಂದು ಸ್ಪೋಟದಿಂದ ಬಚಾವಾಗಿ ಉಳಿದ ಪ್ರತ್ಯಕ್ಷ ದರ್ಶಿಗಳು ವಿವರಿಸಿದ್ದಾರೆ.ಘಟನೆಯಲ್ಲಿ 28 ಮಂದಿ ತಾಲಿಬಾನಿಗಳು ಕೂಡ ಹತ್ಯೆಯಾಗಿರುವುದು ಗಮನಾರ್ಹ. ಇಸ್ಲಾಮಿಕ್ ಸ್ಟೇಟ್ ಖೋರಾಸನ್ (ಐಎಸ್-ಕೆ) ಸ್ಪೋಟದ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ತಾಲಿಬಾನ್ ನಾಯಕರು ಘಟನೆಯನ್ನು ಖಂಡಿಸಿದ್ದು, ಆಫ್ಘಾನಿಸ್ತಾನದ ನೆಲದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು