ಗುವಾಹಟಿ: ಅತ್ಯಾಚಾರ ಎಸಗುವ ದುಷ್ಕರ್ಮಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು ಎಂದು ಅಸ್ಸಾಂನ ತೇಜ್ಪುರದ ಬಿಜೆಪಿ ಸಂಸದ ಆರ್.ಪಿ.ಶರ್ಮಾ ಹೇಳಿಕೆ ನೀಡಿದ್ದಾರೆ. ಸ್ತ್ರೀಗೆ ಅಗೌರವ ತೋರುವ ವ್ಯಕ್ತಿಗೆ ಮರಣದಂಡಣೆ ಶಿಕ್ಷೆಯೇ ತಕ್ಕ ಪಾಠ ಎಂದು ಅವರು ಹೇಳಿದ್ದಾರೆ.
ಅಸ್ಸಾಂ ರಾಜ್ಯದ ಬೊರ್ಡುವಾದಲ್ಲಿ ಐದು ವರ್ಷದ ಬಾಲಕಿ ಮೇಲೆ ಆಕೆಯ ಮನೆಯಲ್ಲೇ ಸಾಮೂಹಿಕ ಅತ್ಯಾಚಾರ ನಡೆದಿತ್ತು.