News Karnataka Kannada
Monday, April 29 2024
ವಿದೇಶ

ಅಂತಾರಾಷ್ಟ್ರೀಯ ಗಡಿಗಳನ್ನು ತೆರೆದಿದ ಅಮೆರಿಕ: ಭಾರತೀಯರು ಸೇರಿದಂತೆ ರಾಷ್ಟ್ರಗಳ ಇತರೆ ಪ್ರಜೆಗಳಿಗೆ ಪ್ರಯಾಣಕ್ಕೆ ಅನುಮತಿ

Dubai-Mangaluru flight passengers shocked to hear ticket prices
Photo Credit :

ನವದೆಹಲಿ: ಬರೋಬ್ಬರಿ ಎರಡು ವರ್ಷಗಳ ನಂತರ ಅಮೆರಿಕ ತನ್ನ ಅಂತಾರಾಷ್ಟ್ರೀಯ ಗಡಿಗಳನ್ನು ತೆರೆದಿದೆ. ಹೀಗಾಗಿ, 2 ಡೋಸ್‌ ಲಸಿಕೆ ಹಾಕಿಸಿಕೊಂಡ ಮತ್ತು ಕೊರೊನಾ ನೆಗೆಟಿವ್‌ ವರದಿ ಪಡೆದುಕೊಂಡ ಭಾರತೀಯರು ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಪ್ರಜೆಗಳಿಗೆ ಆ ದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗಲಿದೆ.ಇದಲ್ಲದೆ ಅಮೆರಿಕ-ಮೆಕ್ಸಿಕೋ ನಡುವಿನ ಗಡಿಯೂ ತೆರೆಯಲಿದೆ. ಜಗತ್ತಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಲಾರಂಭಿಸುತ್ತಿದ್ದಂತೆಯೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿಷೇಧ ಹೇರಿತ್ತು.

ಇದರಿಂದಾಗಿ ಅಮೆರಿಕದಲ್ಲಿ ಇರುವ ಭಾರತೀಯರಿಗೆ ಸ್ವದೇಶಕ್ಕೆ ಆಗಮಿಸಲು, ಭಾರತದಿಂದ ಅಮೆರಿಕಕ್ಕೆ ಕೆಲಸ, ಶಿಕ್ಷಣದ ನಿಮಿತ್ತ ವಿವಿಧ ಪ್ರಾಂತ್ಯಗಳು ತೆರಳಲು ಅನುಕೂಲವಾಗಿದೆ. ಈ ಬಗ್ಗೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಜೈಪುರದ ಆದಿತ್ಯ ಗರ್ಗ್‌ ಎಂಬುವರು ಅಮೆರಿಕ ಸರ್ಕಾರದ ನಿರ್ಧಾರದಿಂದ ಸ್ಯಾನ್‌ಫ್ರಾನ್ಸಿಸ್ಕೋಗೆ ಕೆಲಸಕ್ಕಾಗಿ ತೆರಳಲು ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು