ಉಡುಪಿ: ಉಚಿತ ಸಿಟಿ ಸ್ಕ್ಯಾನ್ ಸೇವೆ ಬಂದ್ ಬಡರೋಗಿಗಳ ಸಂಕಷ್ಟ ಎದುರಾಗಿದ್ದು, ಉಡುಪಿ ಜಿಲ್ಲಾಸ್ಪತ್ರೆಯಲ್ಲೂ ಸಿಟಿ ಉಚಿತ ಸ್ಕ್ಯಾನಿಂಗ್ ಸೇವೆ ಬಂದ್ ಮಾಡಲಾಗಿದೆ.
ಸರ್ಕಾರಿ ಆಸ್ಪತ್ರೆಯ ವೈದ್ಯರ ಸೂಚನೆ ಮೇರೆಗೆ ಉಚಿತ ಸಿಟಿಸ್ಕ್ಯಾನ್, ಎಮ್ ಆರ್ ಐ ಮಾಡಲಾಗುತ್ತಿತ್ತು. ಸರ್ಕಾರದಿಂದ ಬಿಲ್ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ಉಚಿತ ಸಿಟಿ ಸ್ಕ್ಯಾನಿಂಗ್ ಬಂದ್ ಮಾಡಲಾಗಿದೆ.

ಖಾಸಗಿ ಆಸ್ಪತ್ರೆ ಯಿಂದ ಬರುವ ರೋಗಿಗಳಿಗೆ ಮತ್ತು ಬಿಲ್ ಪಾವತಿ ಮಾಡುವ ರೋಗಿಗಳಿಗೆ ಸ್ಕ್ಯಾನಿಂಗ್ ಮುಂದುವರಿದಿದೆ. ತೀರಾ ತುರ್ತು ಪರಿಸ್ಥಿತಿಗೆ ಜಿಲ್ಲಾ ಸರ್ಜನ್ ಹಾಗೂ ಜಿಲ್ಲಾಡಳಿತ ಮನವಿ ಮೇರೆಗೆ ಸಿಬ್ಬಂದಿಗಳು ಸ್ಕ್ಯಾನಿಂಗ್ ಗೆ ಒಪ್ಪಿಕೊಂಡಿದ್ದಾರೆ.
ರಾಜ್ಯ ಸರ್ಕಾರದಿಂದ ಗುತ್ತಿಗೆ ಪಡೆದು ಕೃಷ್ಣ ಡಯಾಗ್ನೊಸ್ಟಿಕ್ ಸೆಂಟರ್ ಕೆಲ್ಸ ಮಾಡುತ್ತಿತ್ತು. 3-4 ವರ್ಷಗಳಿಂದ ಪೇಮೆಂಟ್ ಪೆಂಡಿಂಗ್ ಇಡಲಾಗಿದೆ. ಸಿಬ್ಬಂದಿ ವೇತನ ಸೇರಿದಂತೆ ನಿರ್ವಹಣೆ ಸಮಸ್ಯೆಯಿಂದ ಉಚಿತ ಸೇವೆ ಬಂದ್ ಮಾಡಲಾಗಿದೆ. ಕೃಷ್ಣ ಡಯಾಗ್ನೊಸ್ಟಿಕ್ ಸೆಂಟರ್ ಅಜ್ಜರಕಾಡು ಜಿಲ್ಲಾಸ್ಪತ್ರೆ ಯ ಆವರಣದಲ್ಲಿದೆ. ಸದ್ಯ ಖಾಸಗಿ ಆಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಗಳಿಗೂ ಉಚಿತ ಸೇವೆಗೆ ಲ್ಲಾ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.

