ಉಡುಪಿ: ನಡುರಸ್ತೆಯಲ್ಲಿ ಕುಣಿದು, ಪಟಾಕಿ ಸಿಡಿಸಿ ನಡುರಸ್ತೆಯಲ್ಲಿಯೇ ಹುಚ್ಚಾಟ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಟೋಲ್ ಗೇಟ್ ಬಳಿ ನಡೆದಿದೆ.

ಕೇರಳದ ವಿದ್ಯಾರ್ಥಿಗಳಿಂದ ಪಟಾಕಿ ಸಿಡಿಸಿ ಹುಚ್ಚಾಟ ನಡೆಸಿದ್ದಾರೆ. ಕೇರಳದಿಂದ ಉಡುಪಿ ಕಡೆ ಪ್ರವಾಸಕ್ಕೆಂದು ಎರಡು ಬಸ್ ಗಳಲ್ಲಿ ವಿದ್ಯಾರ್ಥಿಗಳು ಬಂದಿದ್ದರು.

ಟೋಲ್ ಗೇಟ್ ಬಳಿ ಬಸ್ ನಿಲ್ಲಿಸಿ ವಿದ್ಯಾರ್ಥಿಗಳು ಹುಚ್ಚಾಟ ಮಾಡಿದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.