ಉಡುಪಿ: ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ಉಡುಪಿ ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದಲ್ಲಿ “ಭೀಮ್ ಜಯಂತೋತ್ಸವ”ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ, ಬೋಧಿಸತ್ವ ಬುದ್ಧ ವಿಹಾರ ಹಾವಂಜೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) ಇವರ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಂಗಳೂರಿನ ಮಹಾಬೋಧಿ ಲೋಕಶಾಂತಿ ಬುದ್ಧವಿಹಾರದ ಪೂಜ್ಯ ಬಿಕ್ಕು ಪಣ್ಯಪಾಲ ಭಂತೇಜಿ, ಪೂಜ್ಯ ಸದ್ಧಾರಖಿತ ಭಂತೇಜಿ, ಪೂಜ್ಯ ಧಮ್ಮವರೋ ಭಂತೇಜಿ, ಪೂಜ್ಯ ಸಂತಚಿತ್ತೋ ಭಂತೇಜಿ ರವರ ಸಾನಿಧ್ಯದಲ್ಲಿ ಬುದ್ಧ ವಂದನೆ, ಧಮ್ಮ ವಂದನೆ ಹಾಗೂ ಸಂಘ ವಂದನೆ ನೆರವೇರಿಸಲಾಯಿತು.
ಭಂತೇಜಿಗಳು ಭಗವಾನ್ ಬುದ್ಧರ ಧಮ್ಮದ ಪ್ರವಚನ ನೀಡಿ, ಅಂಬೇಡ್ಕರ್ ಅವರ ಸಮಾನತೆ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ವಿವರಿಸಿದರು. ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷ ಶೇಖರ್ ಹಾವಂಜೆ ಮಾತನಾಡಿ, ಫೌಂಡೇಶನ್ ಹುಟ್ಟಿರುವ ಕುರಿತು ಮತ್ತು ಬೋಧಿಸತ್ವ ಬುದ್ಧ ವಿಹಾರದಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಉಡುಪಿ ಜಿಲ್ಲಾ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಅಜಯ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) ರಾಜ್ಯ ಸಂಘಟನಾ ಸಂಚಾಲಕ ರಾಜು ಎಂ ತಳವಾರ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ, ಪತ್ರಕರ್ತರಾದ ಡಾ. ಕೆ ಎ ಓಬಳೇಶ್, ರುಡ್ ಸೆಟ್ ನಿರ್ದೇಶಕ ಡಾ. ಬೊಮ್ಮಯ್ಯ, ಆವರ್ಸೆ ಗ್ರಾಪಂ ಪಿಡಿಒ ದಿವ್ಯ ಶೇಖರ್, ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ, ಮುರಳಿ. ಎಂ. ಮಾರ್ಪಳ್ಳಿ, ಸದಾಶಿವ ಹಾವಂಜೆ, ಶಂಭು ಸುವರ್ಣ, ವಕೀಲ ಶರತ್.ಎಸ್ ಹಾವಂಜೆ ಉಪಸ್ಥಿತರಿದ್ದರು. ಜಯಶೀಲ ಬಿ ರೋಟೆ ಬ್ರಹ್ಮಾವರ ನಿರೂಪಿಸಿದರು. ಶರತ್.ಎಸ್ ಹಾವಂಜೆ ವಂದಿಸಿದರು.

